Breaking News

ಸಾಯೋರನ್ನ ಹಿಡಿಯೋಕಾಗುತ್ತಾ’?: ಸಚಿವ ಮನಗೊಳಿ ವಿವಾದಾತ್ಮಕ ಹೇಳಿಕೆ.

ಬೆಂಗಳೂರು: ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ಅಲೋಕ್ ಕುಮಾರ್ ಅವರು ಇಂದು ಸಿಸಿಬಿ ಕ್ರೈಂ ರಿವ್ಯೂ ಮೀಟಿಂಗ್​ ನಡೆಸಿ, ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಮೀಟರ್ ಬಡ್ಡಿ, ಮಟ್ಕಾ ದಂಧೆಗೆ ತಡೆ ಹಾಕುವಂತೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಸಿಸಿಬಿ ಕ್ರೈಂ ರಿವ್ಯೂ ಮೀಟಿಂಗ್​ನಲ್ಲಿ ಐಪಿಎಸ್​ ಅಲೋಕ್ ಕುಮಾರ್ ಖಡಕ್ ಸೂಚನೆ ನೀಡಿದರು. ಸಭೆಯಲ್ಲಿ ಸಿಸಿಬಿ ಡಿಸಿಪಿ, ಸಿಸಿಬಿಯ ಎಲ್ಲಾ ಎಸಿಪಿ ಮತ್ತು ಇನ್ಸ್ ಪೆಕ್ಟರ್ ಗಳು ಭಾಗಿಯಾಗಿದ್ದರು.
ಇನ್ನು ಮುಂದೆ ಹಿರಿಯ ಅಧಿಕಾರಿಗಳು ಜನ ಮೆಚ್ಚುಗೆ ವ್ಯಕ್ತಪಡಿಸುವಂತೆ ಕೆಲಸ ನಿರ್ವಹಿಸಿ. ಸಂಘಟಿತ ಅಪರಾಧ ಕಾರ್ಯಗಳಿಗೆ ಕಡಿವಾಣ ಹಾಕುವುದಕ್ಕೆ ಮೊದಲ ಆದ್ಯತೆ ನೀಡಿ. ಇರುವ ಎಲ್ಲಾ ರೌಡಿಗಳಿಗೆ ಒಮ್ಮೆ ವಾರ್ನ್ ಮಾಡಿ. ಅದಾಗಿಯೂ ಬುದ್ಧಿ ಕಲಿಯದೇ ಇದ್ದಲ್ಲಿ ಗೂಂಡಾ ಆ್ಯಕ್ಟ್ ಅಡಿ ಬಂಧಿಸಿ ಎಂದು  ಎಚ್ಚರಿಕೆಯ ಸಂದೇಶ ರವಾನಿಸಿದರು.
ಅಪರಾಧ ಪ್ರಕರಣದಲ್ಲಿ ಬೇಕಾಗಿರುವವರನ್ನೆಲ್ಲಾ ಪಟ್ಟಿ ಮಾಡಿ. ಅದರ ಬಗ್ಗೆ ಒಂದಷ್ಟು ಪ್ಲ್ಯಾನ್ ರಚಿಸಿ. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವ್ರು ನಂಬಿಕೆ ಇಟ್ಟು ಈ ಹುದ್ದೆ ನೀಡಿದ್ದಾರೆ. ಈ ಹಿನ್ನೆಲೆ ನಾವುಗಳು ಅಪರಾಧ ಪ್ರಕರಣಗಳನ್ನ ತಡೆಗಟ್ಟಿ ಜನರ ಸಹಾಯಕ್ಕೆ ನಿಲ್ಲಬೇಕು. ಇನ್ನು‌ ಮುಂದೆ ಯಾವುದೇ ಪ್ರಕರಣವಾದರೂ ಒಮ್ಮೆ ವಾರ್ನ್ ಮಾಡಿ, ನಂತರ ಬಂಧಿಸಿ ಎಂದು ಕಟ್ಟುನಿಟ್ಟಾದ ಆದೇಶ ನೀಡಿದ್ದಾರೆ.
Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *