ಸತ್ನಾ(ಮಧ್ಯಪ್ರದೇಶ): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಲ್ಲಿನ ರ್ಯಾಲಿಯಲ್ಲಿ ಭಾಗವಹಿಸಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದರು. ಇಬ್ಬರು ಸುಳ್ಳನ್ನು ಘೋಷಿಸುವ ಯಂತ್ರಗಳು ಎಂದು ವ್ಯಂಗವಾಡಿದರು.
ರಾಹುಲ್ ಗಾಂಧಿ ಇಲ್ಲಿನ ರ್ಯಾಲಿ ಉದ್ದೇಶಿಸಿ ಮಾತಾನಾಡುತ್ತಾ ” ಮಧ್ಯಪ್ರದೇಶದಲ್ಲಿ ಯಾವಾಗಾದರೂ ಸಿಎಂ ವೇದಿಕೆಗೆ ಬಂದರೆ ಅವರನ್ನು ಇಲ್ಲಿ ಘೋಷಣಾ ಯಂತ್ರ ಎಂದು ಕರೆಯುತ್ತಾರೆ. ಸುಮಾರು 20 ಸಾವಿರ ಘೋಷಣೆಗಳನ್ನು ಇದುವರೆಗೆ ಮಾಡಲಾಗಿದೆ ಎಂದು ತಿಳಿಸಿದರು.ಇನ್ನೊಂದೆಡೆ ಪ್ರಧಾನಿ ಮೋದಿ ವೇದಿಕೆಗೆ ಬಂದ ತಕ್ಷಣ ಎಲ್ಲರು ಅವರು ಸುಳ್ಳನ್ನು ಹೇಳುತ್ತಾರೆ ಎಂದು ಭಾವಿಸುತ್ತಾರೆ. ಅಂದ್ರೆ ಒಂದು ಕಡೆ ಘೋಷಣಾ ಯಂತ್ರ ಮತ್ತೊಂದು ಕಡೆ ಸುಳ್ಳಿನ ಯಂತ್ರ ಎಂದು ಚೌಹಾನ್ ಮತ್ತು ಪ್ರಧಾನಿ ಮೋದಿ ಕಾರ್ಯಶೈಲಿಯನ್ನು ಕುಟುಕಿದರು.
ರಾಹುಲ್ ಈಗ ಮಧ್ಯಪ್ರದೇಶದಲ್ಲಿ ಎರಡು ದಿನಗಳ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದು ,230 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಇರುವುದರಿಂದ ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದರು. ಇದೆ ವೇಳೆ ಮೋದಿ ಸರ್ಕಾರದ ರಫೇಲ್ ಒಪ್ಪಂದದಲ್ಲಿನ ಅವ್ಯವಹಾರದ ಕುರಿತಾಗಿ ಟೀಕಾ ಪ್ರಹಾರ ನಡೆಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





