ಬೆಂಗಳೂರು : ಪರದೆ ಮೇಲೆ ಫಳ ಫಳ ಅಂತಾ ಹೊಳೀತಿದ್ದ ಬಾಲಿವುಡ್ನ ಜೋಡಿ ದೀಪ್ವೀರ್ ಮೊನ್ನೆಯಷ್ಟೇ ವಿದೇಶದಲ್ಲಿ ಹಸಮಣೆ ಏರಿತ್ತು. ಅವರಿಬ್ಬರ ಆರತಕ್ಷತೆ ಇಂದು ಕನ್ನಡದ ನೆಲದಲ್ಲೇ ನಡೀತಿದೆ. ಬೆಂಗಳೂರಿನ ಲೀಲಾ ಪ್ಯಾಲೇಸ್ನ ದೀಪಿಕಾ-ರಣ್ವೀರ್ ರಿಸೆಪ್ಷನ್ ನಡೆಯಲಿದ್ದು ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿದೆ. ಇನ್ನು, ಲೀಲಾ ಪ್ಯಾಲೇಸ್ನಲ್ಲೇ ರಿಸೆಪ್ಷನ್ ಯಾಕೆ ಅನ್ನೋದನ್ನ ಹುಡುಕುತ್ತಾ ಹೋದರೆ ಇಲ್ಲಿರುವ ಇಟಾಲಿಯನ್ ರೆಸ್ಟೋರೆಂಟ್. ಅಲ್ಲದೇ ದೀಪಿಕಾಗೆ ಈ ಹೊಟೇಲ್ ಮೊದಲಿನಿಂದಲೂ ಅಚ್ಚು-ಮೆಚ್ಚಂತೆ. ಜೊತೆಗೆ ಲೀಲಾ ಪ್ಯಾಲೇಸ್ನ ವಾಸ್ತುಶಿಲ್ಪ ಸಹ ಮತ್ತೊಂದು ಕಾರಣವಂತೆ. 7 ಎಕರೆ ಜಾಗದಲ್ಲಿನ ಹಸಿರು, ತಾಮ್ರ ವರ್ಣದ ಆಕರ್ಷಣೆ ಕೂಡ ರಿಸೆಪ್ಷನ್ಗೆ ಪ್ಲೇಸ್ ಬುಕ್ ಮಾಡಲು ಕಾರಣವಾಗಿದೆ. ಇನ್ನು, ಬಾಲಿವುಡ್ ಸೆಲೆಬ್ರಿಟಿಗಳಿಗಾಗಿ ಇದೇ ನವಂಬರ್ 28ರಂದು ಮುಂಬೈನಲ್ಲಿ ದೀಪ್ವೀರ್ ಮತ್ತೊಂದು ರಿಸೆಪ್ಷನ್ ಹಮ್ಮಿಕೊಂಡಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





