Breaking News

ದೇಶದ ಮಹಿಳೆಯರು ಹೊರ ಬರಲು ಭಯಪಡ್ತಿದ್ದಾರೆ: ರಾಹುಲ್​

ಹೈದ್ರಾಬಾದ್​: ದೇಶದಲ್ಲಿ ನಡೆಯುತ್ತಿರುವ ದಾಳಿಗಳು, ಹಾಗೂ ಲೈಂಗಿಕ ದೌರ್ಜನ್ಯಗಳಿಂದ ಮಹಿಳೆಯರು ಹೊರ ಬರಲು ಭಯಪಡುತ್ತಿದ್ದಾರೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಗುಡುಗಿದ್ದಾರೆ. ದೇಶದಲ್ಲಿ ಮಹಿಳೆಯರು ಭಯ ಪಡುವಂತಹ ವಾತಾವರಣ ನಿರ್ಮಾಣವಾಗಿದೆ, ಸ್ವತಂತ್ರವಾಗಿ ಓಡಾಡಲು ಆಗುತ್ತಿಲ್ಲ ಅಂತ ರಾಹುಲ್ ಗುಡುಗಿದ್ದಾರೆ.ಹೈದ್ರಾಬಾದ್​ನ ಚಾರ್​ಮಿನಾರ್​ದಲ್ಲಿ ಹಮ್ಮಿಕೊಂಡಿದ್ದ​ ರಾಜೀವ್ ಗಾಂಧಿ ಸದ್ಭಾವನಾ ಯಾತ್ರಾ ಸಮಾರಂಭದಲ್ಲಿ ಮಾತನಾಡಿದ ರಾಹುಲ್​, ಸ್ವಾತಂತ್ರ್ಯ ಹೋರಾಟಗಾರ ವಿ.ಡಿ.ಸಾವರ್ಕರ್​ರನ್ನ ಬಿಜೆಪಿ ಸರ್ಕಾರ ದೇಶ ಭಕ್ತರೆಂದೇ ಪೂಜಿಸುತ್ತಾರೆ. ಬ್ರಿಟೀಷರು ಮಹಾತ್ಮಾ ಗಾಂಧಿ ಅವರನ್ನ ಜೈಲಿಗೆ ಹಾಕಿದಾಗ ವಿ.ಡಿ. ಸಾವರ್ಕರ್ ಗಾಂಧೀಜಿಯನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ​ ಬ್ರಿಟಿಷ್​ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇಂತಹ ಮಹಾನ್​ ನಾಯಕರು ನಮ್ಮ ದೇಶಲ್ಲಿದ್ದರು. ದೇಶದಲ್ಲಿ ಸದ್ಯ ಎರಡು ರೀತಿಯ ಸಿದ್ಧಾಂತಗಳಿವೆ. ಒಂದು ದ್ವೇಷಿಸುವವರು, ಇನ್ನೊಂದು ಪ್ರೀತಿಸುವವರು. ಇವೆರಡರ ನಡುವೆ ಜಗಳ ಶುರುವಾಗಿದೆ ಎಂದು ರಾಹುಲ್​ ಕುಟುಕಿದ್ದಾರೆ. ಅಲ್ಲದೇ ದೇಶದ ಹಲವು ರಾಜ್ಯಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ದಲಿತ ಆದಿವಾಸಿ ಮುಸ್ಲಿಂ ಜನಾಂಗದ ಮೇಲೆ ಬೆದರಿಕೆ ಹಾಕಲಾಗುತ್ತಿದೆ. ಪ್ರಧಾನಿ ದೇಶವನ್ನು ಒಡೆಯಲು ಯತ್ನಿಸುತ್ತಿದ್ದಾರೆ ಅಲ್ಲದೇ ಅವರ ಬೆಂಬಲಿಗರೂ ಕೂಡ ಅದೇ ಕೆಲಸಕ್ಕೆ ನಿಂತಿದ್ದಾರೆ ಅಂತ ರಾಹುಲ್ ಕಿಡಿಕಾರಿದ್ದಾರೆ.

Share News

About Shaikh BIG TV NEWS, Hubballi

Check Also

ಮ್ಯಾನ್ಮರ್ ಭೂಕಂಪನದಲ್ಲಿ 1700ಕ್ಕೂ ಹೆಚ್ಚು ಮಂದಿ ದುರ್ಮರಣ.!

ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಮ್ ನೆಟ್ ವರ್ಕ್ ಸಮಿತಿಯ ಸದಸ್ಯ ಕುನ್ ಕೀ ಶುಕ್ರವಾರ ಸಂಭವಿಸಿದ ಭೂಕಂಪನದಿಂದ 60 ಮಸೀದಿಗಳು …

Leave a Reply

Your email address will not be published. Required fields are marked *