Breaking News

ಅಡುಗೆ ಮನೆಯಲ್ಲಿ ಹಾವು : ಕುಟುಂಬಸ್ಥರು ಕಂಗಾಲು

ನವಲಗುಂದ : ತಾಲೂಕಿನ ತಿರ್ಲಾಪುರ ಗ್ರಾಮದ ಮನೆಯೊಂದರಲ್ಲಿ ಬೃಹದಾಕಾರದ ನಾಗರ ಹಾವೊಂದು ಕಾಣಿಸಿಕೊಂಡ ಪರಿಣಾಮ ಮನೆಯವರು ಆತಂಕಕ್ಕೀಡಾದ ಘಟನೆ

ಗುರುವಾರ ಮಧ್ಯ ರಾತ್ರಿ ನಡೆದಿದೆ . ರಜಾಕ್ ಎಂಬುವರ ಮನೆಯಲ್ಲಿನ ಅಡುಗೆ ಕೋಣೆಯಲ್ಲಿ ಸುಮಾರು 10 ವರ್ಷ ಮೇಲ್ಪಟ್ಟ ಬೃಹತ್ ನಾಗರಹಾವು ಕಾಣಿಸಿಕೊಂಡಿದೆ . ಕೂಡಲೇ ಮನೆಯವರು ಉರಗ ತಜ್ಞ ಸಂಗಮೇಶ ಅವರಿಗೆ ಕರೆ ಮಾಡಿದ್ದಾರೆ .

ರಜಾಕ್ ಅವರ ಮನವಿಗೆ ಸ್ಪಂದಿಸಿದ ಸ್ನೇಕ್ ಸಂಗಮೇಶ ಮಧ್ಯರಾತ್ರಿ ತಿರ್ಲಾಪುರದಲ್ಲಿರುವ ರಜಾಕ್ ಅವರ ಮನೆಗೆ ತೆರಳಿ ಅಡುಗೆ ಮನೆಯಲ್ಲಿ ಅವಿತು ಕೂತಿದ್ದ ನಾಗರ ಹಾವನ್ನು ರಕ್ಷಣೆ ಮಾಡಿ , ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಮನೆಯವರ ಆತಂಕ ಕಡಿಮೆ ಮಾಡಿದ್ದಾರೆ .

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *