Breaking News

ಜಮಖಂಡಿಯಲ್ಲಿ ಹಾಲಿ, ಮಾಜಿ ಡಿಸಿಎಂ ಕಾದಾಟ..

ಬಾಗಲಕೋಟೆ : ಜಮಖಂಡಿ ಕ್ಷೇತ್ರದಲ್ಲಿ ಇಂದು ಹಾಲಿ,‌ ಮಾಜಿ ಡಿಸಿಎಂಗಳು ಪ್ರಚಾರ‌ ಕೈಗೊಳ್ಳಲಿದ್ದಾರೆ. ಹಾಲಿ ಡಿಸಿಎಂ ಡಾ.ಜಿ. ಪರಮೇಶ್ವರ್ ತಮ್ಮ ಅಭ್ಯರ್ಥಿ ಆನಂದ ನ್ಯಾಮಗೌಡ ಪರ ವಿವಿಧ ಹಳ್ಳಿಗಳಿಗೆ ತೆರಳಿ ಮತಯಾಚನೆ ಮಾಡಲಿದ್ದಾರೆ. ಯಾವುದೇ ಪ್ರಚಾರ ಕಾರ್ಯಕ್ರಮ ಪಟ್ಟಿ ಸಿದ್ಧಪಡಿಸದೆ ಪ್ರಚಾರಕ್ಕೆ ತೆರಳುತ್ತಿರುವ ಪರಮೇಶ್ವರ್​ ಅವ್ರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಇನ್ನಿತರ ಸ್ಥಳೀಯ ಮುಖಂಡರು ಸಾಥ್ ನೀಡಲಿದ್ದಾರೆ.ಇನ್ನು ಬಿಜೆಪಿ ಅಭ್ಯರ್ಥಿ ಪರ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಇಂದು ಜಮಖಂಡಿ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಸಿದ್ದಾಪುರ, ಹುಲ್ಯಾಳ, ಲಿಂಗನೂರು, ಕೊಣ್ಣೂರ ಗ್ರಾಮಗಳಲ್ಲಿ ಈಶ್ವರಪ್ಪ ಪ್ರಚಾರ ಮಾಡಲಿದ್ದಾರೆ. ಈಶ್ವರಪ್ಪ ಜೊತೆ ಅರವಿಂದ ಲಿಂಬಾವಳಿ ಹಾಗೂ ಲಕ್ಷ್ಮಣ ಸವದಿ ಕೂಡಾ ಕೆಲವು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಪರ ಮತಯಾಚಿಸಲಿದ್ದಾರೆ.

Share News

About Shaikh BIG TV NEWS, Hubballi

Check Also

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರೀ ಅಗ್ನಿ ಅವಘಡ – ಮೆಟ್ರೋ ಕಾಂಪ್ಲೆಕ್ಸ್‌ನಲ್ಲಿ ಲಕ್ಷಾಂತರ ನಷ್ಟ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ಭಾರೀ ಅಗ್ನಿ ಅವಘಡ ಸಂಭವಿಸಿದೆ. ಮರಾಠ ಗಲ್ಲಿಯಲ್ಲಿರುವ ಮೆಟ್ರೋ ಕಾಂಪ್ಲೆಕ್ಸ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ …

Leave a Reply

Your email address will not be published. Required fields are marked *