Breaking News

ನಾಗರತ್ನ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲ್ವಾ..?ಕಾರಣವೇನು?

ಬೆಂಗಳೂರು: ನಟ ದುನಿಯಾ ವಿಜಿ 2ನೇ ಪತ್ನಿ ಕೀರ್ತಿಗೌಡ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲ ಪತ್ನಿ ನಾಗರತ್ನ ಇಂದು ಕೂಡ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸೋದು ಅನುಮಾನ ಎನ್ನಲಾಗುತ್ತಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ನಾಗರತ್ನ ಮೇಲೆ ಐಪಿಸಿ ಸೆಕ್ಷನ್ 326 (ಮಾರಕಾಸ್ತ್ರಗಳಿಂದ ಗಂಭೀರ ಹಲ್ಲೆ) ಸೇರಿಸಿ ಕೋರ್ಟ್​ಗೆ ಮೆಮೋ ಕಳಿಸಿದ್ದಾರೆ. ಆದ್ರೆ ಹಳೇ ಎಫ್ಐಆರ್​ ನಲ್ಲಿ ಇನ್ನೂ ಐಪಿಸಿ ಸೆಕ್ಷನ್ 326 ಸೇರ್ಪಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ನಾಗರತ್ನ ಇಂದು ಕೂಡಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸೋದು ಬಹುತೇಕ ಅನುಮಾನ. ಯಾಕಂದ್ರೆ ಮೊದಲು ಹಳೆಯ ಎಫ್ಐಆರ್​ಗೆ ಹೆಚ್ಚುವರಿಯಾಗಿ 326 ಸೇರ್ಪಡೆ ಮಾಡಬೇಕೆಂದು ನ್ಯಾಯಾಧೀಶರಿಗೆ ಮನವಿ ಮಾಡಬೇಕು. ನಂತರ ನ್ಯಾಯಾಧೀಶರಿಂದ ಅನುಮತಿ ಪಡೆದು 326 ಸೇರ್ಪಡೆ ಮಾಡಬೇಕು. ಈ ಹಿನ್ನಲೆಯಲ್ಲಿ ಇಂದು ಗಿರಿನಗರ ಪೊಲೀಸರು ನ್ಯಾಯಾಧೀಶರಿಂದ ಅನುಮತಿ ಪಡೆಯುವ ಸಾಧ್ಯತೆಯಿದೆ. ಆ ನಂತರ ಹೆಚ್ಚುವರಿಯಾಗಿ ಐಪಿಸಿ ಸೆಕ್ಷನ್ 326 ಸೇರ್ಪಡೆ ಮಾಡಲಿದ್ದಾರೆ. ಹೆಚ್ಚುವರಿ ಎಫ್ಆರ್‌ಆರ್‌ ಸಿಕ್ಕ ಬಳಿಕವಷ್ಟೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಇಂದು ನಾಗರತ್ನ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವುದು ಅನುಮಾನ ಎನ್ನಲಾಗುತ್ತಿದೆ.

Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *