Breaking News

ಅಲಹಾಬಾದ್, ಫೈಜಾಬಾದ್‌ ಆಯ್ತು; ತಾಜ್​ಮಹಲ್​​ ನಗರಿ ಹೆಸರೂ ಚೇಂಜ್ ಆಗುತ್ತಾ..?

ಉತ್ತರ ಪ್ರದೇಶ: ಆಗ್ರಾ ಅಂದ್ರೆ ಥಟ್ ಅಂತ ನೆನಪಾಗೋದು ತಾಜ್‌ಮಹಲ್. ಆದ್ರೆ ಇದೀಗ ಆಗ್ರಾ ಎಂಬ ಹೆಸರನ್ನೇ ಬದಲಾಯಿಸುವಂತೆ ಒತ್ತಾಯ ಕೇಳಿಬಂದಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಲಹಾಬಾದ್ ಅನ್ನು ಪ್ರಯಾಗರಾಜ್‌, ಫೈಜಾಬಾದ್‌ ಹೆಸರನ್ನ ಅಯೋಧ್ಯೆ ಅಂತಾ ಬದಲಾಯಿಸಿದ್ದಾರೆ. ಇದೀಗ ಉತ್ತರ ಪ್ರದೇಶದ ಬಿಜೆಪಿ ಮುಖಂಡರು ಇನ್ನೂ ಅನೇಕ ನಗರಗಳ ಹೆಸರು ಬದಲಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಅದರಲ್ಲಿ ಆಗ್ರಾ ಎಂಬ ಹೆಸರನ್ನು ಬದಲಾಯಿಸಿ ಅಗರ್ವಾಲ್ ಅಥವಾ ಅಗರ್ವಾನ್ ಆಗಿ ಮರುನಾಮಕರಣ ಮಾಡಿ ಅಂತಾ ಬಿಜೆಪಿ ಶಾಸಕ ಜಗನ್ ಪ್ರಸಾದ್ ಗಾರ್ಗ್ ಮನವಿ ಮಾಡಿದ್ದಾರೆ.ಆಗ್ರ ಎಂಬ ಹೆಸರಿಗೆ ಯಾವುದೇ ಅರ್ಥವಿಲ್ಲ. ಅಲ್ಲದೇ ಈ ಹೆಸರು ಯಾವುದಕ್ಕೂ ಹೊಂದಾಣಿಕೆ ಆಗುವುದಿಲ್ಲ. ಅಲ್ಲದೇ ನಗರದಲ್ಲಿ ಅಗರ್ವಾಲ್ ಸಮುದಾಯದವರು ಹೆಚ್ಚು ವಾಸಿಸುತ್ತಿದ್ದಾರೆ. ಹಾಗಾಗಿ ಅಗರ್ವಾಲ್ ಅಥವಾ ಅಗರ್ವಾನ್ ಅಂತಾ ಬದಲಾಯಿಸಿ ಎಂದಿದ್ದಾರೆ. ಇನ್ನೊಬ್ಬ ಬಿಜೆಪಿ ಶಾಸಕ ಸಂಗೀತ್ ಸಾಮ್ ಮುಜಾಫರ್‌ನಗರಕ್ಕೆ ಲಕ್ಷ್ಮೀನಗರ ಅಂತಾ ಮರುನಾಮಕರಣ ಮಾಡುವಂತೆ ಆಗ್ರಹಿಸಿದ್ದಾರೆ.

Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *