ಬೆಂಗಳೂರು: ನರೇಂದ್ರ ಮೋದಿ ನೀತಿಗೆಟ್ಟ ಪ್ರಧಾನಿ. ಸುಳ್ಳಿನ ಸರದಾರ ಅಂದ್ರೆ ಪ್ರಧಾನಿ ಮೋದಿ. ಈ ಹಿಂದೆ ಕೊಟ್ಟಿರುವ ಯಾವುದೇ ಭರವಸೆಯನ್ನ ಈಡೇರಿಸಿಲ್ಲ. ಬರೀ ಸುಳ್ಳು ಹೇಳಿಕೊಂಡೇ ತಿರುಗಾಡುತ್ತಿದ್ದಾರೆ ಅಂತಾ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ರೈತರ ಸಾಲಮನ್ನಾ ಬಗ್ಗೆ ಪ್ರಧಾನಿ ಮೋದಿ ವ್ಯಂಗ್ಯ ವಿಚಾರವಾಗಿ ಮಾತನಾಡಿ ಅವರು, ನಮ್ಮ ರಾಜ್ಯದ ಬಗ್ಗೆ ಮೋದಿ ಮಾತನಾಡುತ್ತಿದ್ದಾರೆ. ಈಗಾಗಲೇ ಸಾಲಮನ್ನಾ ಬಗ್ಗೆ ಘೋಷಣೆ ಮಾಡಿದ್ದೇವೆ. ಕೆಲ ದಾಖಲೆ ಬೇಕಾಗುವುದರಿಂದ ಸ್ವಲ್ಪ ಸಮಯ ಬೇಕಾಗುತ್ತದೆ. 65 ಸಾವಿರ ರೈತರಿಗೆ ಋಣಮುಕ್ತ ಪತ್ರ ಕೊಡಲಾಗಿದೆ. ನಮ್ಮ ಸರ್ಕಾರ ರೈತರ ಪರವಾಗಿದೆ. 50-50 ಸಾಲಮನ್ನಾ ಬಗ್ಗೆ ಕೇಂದ್ರ ಸರ್ಕಾರ ಸಹಕಾರ ಕೊಟ್ಟಿಲ್ಲ. ರಾಜ್ಯದ ರೈತರ ಸಾಲಮನ್ನಾ ಯೋಜನೆ ಯಶ್ವಸಿಯಾಗಿದೆ. ಆದ್ರೆ, ಸಾಲಮನ್ನಾ ಬಗ್ಗೆ ಮೋದಿ ತಮಾಷೆ ಮಾಡ್ತಿದ್ದಾರೆ ಅಂತಾ ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ರು.ಇನ್ನು ಕಾಂಗ್ರೆಸ್ ಕೋಟಾದ ನಿಗಮ- ಮಂಡಳಿ ನೇಮಕಾತಿಗೆ ಸಿಎಂ ಬ್ರೇಕ್ ವಿಚಾರವಾಗಿ ಮಾತನಾಡಿ, ನಿಗಮ- ಮಂಡಳಿ ನೇಮಕಾತಿ ಪಟ್ಟಿಯಲ್ಲಿ ಸಣ್ಣಪುಟ್ಟ ಸಮಸ್ಯೆ ಇದೆ. ಕುಳಿತು ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಹೆಚ್.ಡಿ.ರೇವಣ್ಣನವರು ಬಹಿರಂಗವಾಗಿ ಮಾತನಾಡಬಾರದು. ನಾನು ಅವ್ರಿಗೆ ಸಲಹೆ ನೀಡುತ್ತೇನೆ. ಯಾವ್ಯಾವ ನಿಗಮ- ಮಂಡಳಿ ಬರಬೇಕು ಎಂದು ಚರ್ಚೆ ಮಾಡಿದ್ದೇವೆ. ಆದಷ್ಟು ಬೇಗ ಒಟ್ಟಿಗೆ ಕುಳಿತು ಚರ್ಚೆ ಮಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





