Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಕುಂದಗೋಳ ತಾಲೂಕಿನ ವಿಠಲಾಪುರದಲ್ಲಿ ದಲಿತ ಮಹಿಳೆ ಕುಟುಂಬದ ಮೇಲೆ ಹಲ್ಲೆ: ಉಳ್ಳಿಕಾಶಿ…

ಹುಬ್ಬಳ್ಳಿ: ಕುಂದಗೋಳ ತಾಲೂಕಿನ ವಿಠಲಾಪುರ ಗ್ರಾಮದ ಸವರ್ಣಿಯರು ಗ್ರಾಮದ ದಲಿತರ ಮನೆಯನ್ನು ಕೆಡವಿ ಜಾತಿ ನಿಂದನೆ ಮಾಡಿದ್ದು, ದಲಿತರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯದ ಮೂಲಕ ಬಹಿಷ್ಕಾರ ಹಾಕಿ ದಲಿತ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹು-ಧಾ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳದ ಮುಖ್ಯಸ್ಥರಾದ ಗುರುನಾಥ ಉಳ್ಳಿಕಾಶಿ ಆರೋಪಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ವಾಸವಿದ್ದ ಮನೆಯ ಮೇಲೆ ಸವರ್ಣಿಯರು ಏಕಾಏಕಿ ದಾಳಿ ಮಾಡಿ ಮನೆಯನ್ನು ಕೆಡವಿ ಹಲ್ಲೆ ನಡೆಸಿದ್ದಾರೆ. ದಲಿತರು ಪೂಜಿಸುವ ಮಾತಂಗಿ ದೇವರ ಗುಡಿಯ ವಿಚಾರವಾಗಿ ಅನವಶ್ಯಕವಾಗಿ ಜಗಳ ತೆಗೆದುಫೆ.26ರಂದು ದಲಿತ ಸಮುದಾಯಕ್ಕೆ ಸೇರಿದ ಮಹಿಳೆ ಲಕ್ಷ್ಮವ್ವ ಹರಿಜನ ಹಾಗೂ ಅವರ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದರು. ಅಲ್ಲದೆ ಜಾತಿ ನಿಂದನೆ ಮಾಡಿ ಅವರು ವಾಸವಿದ್ದ ಮನೆಯನ್ನು ಹಾಗೂ ದೇವಸ್ಥಾನವನ್ನು ಕಿತ್ತೊಗೆದು ಗ್ರಾಮ ಕಲ್ಲೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಸಿದಗಿಯನ್ನು ತಂದು ಇಟ್ಟು ಅಟ್ಟಹಾಸ ಮೆರೆಯುತ್ತಿದ್ದಾರೆ ಎಂದರು. ಅಲ್ಲದೇ ಸವರ್ಣಿಯರು ದಲಿತ ಕುಟುಂಬವನ್ನು ಊರಿಂದ ಬಹಿಷ್ಕಾರ ಹಾಕಿ ಜಾತಿ ನಿಂದನೆ ಮಾಡುತ್ತಿದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಶೀಘ್ರವಾಗಿ ಸೂಕ್ತ ಕ್ರಮ ಜಾರಿ ಮಾಡಿ ದಲಿತರ ಅಳಲನ್ನು ಆಲಿಸಬೇಕು ಒಂದು ವೇಳೆ ನಿಷ್ಕಾಳಜಿ ನೀತಿ ತೋರಿದರೇ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮವ್ವ ಹರಿಜನ, ಲೋಹಿತ ಗಾಮನಗಟ್ಟಿ, ಪಕ್ಕಣ್ಣ ದೊಡ್ಡಮನಿ ಸೇರಿದಂತೆ ಇತರರು ಇದ್ದರು.

Share News

About Shaikh BIG TV NEWS, Hubballi

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ …

Leave a Reply

Your email address will not be published. Required fields are marked *