ಹುಬ್ಬಳ್ಳಿ: ನಗರದ ಕೋರ್ಟ್ ಸರ್ಕಲ್ ಹತ್ತಿರ ಇರುವ ಶಿರಡಿ ಸಾಯಿಬಾಬಾ ದೇವಸ್ಥಾನದ ಪ್ರಸ್ತುತ ಆಡಳಿತ ಮಂಡಳಿಯವರು ದಬ್ಬಾಳಿಕೆ ಹಾಗೂ ದುರ್ನಡತೆಯಿಂದ ಮನನೊಂದು ಸಹಕಾರಿ ಸಂಘಗಳ ಉಪನಿಬಂಧಕರಿಗೆ ದೂರು ಸಲ್ಲಿಸಲಾಗಿದೆ ಎಂದು ಅನೀಲ ಮಿಸ್ಕಿನ್ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷರಾದ ಟಿ.ಎಸ್.ಮೋಹನಕುಮಾರ, ಕಾರ್ಯದರ್ಶಿ ವೆಂಕಟರಾವ್ ಕುಲಕರ್ಣಿ, ಉಪಾಧ್ಯಕ್ಷ ಮಹಾದೇವ ಮಾಶ್ಯಾಳ ಖಜಾಂಚಿಯಾದ ಗೋವಿಂದ ಕೋಟಕರ ಇನ್ನಿತರ ಸದಸ್ಯರ ದುರಾಡಳಿತ ಖಂಡಿಸಿದ್ದಕ್ಕಾಗಿ ನನ್ನನ್ನು ಸುಮಾರು ಎರಡು ತಿಂಗಳು ಸಭೆ ಹಾಗೂ ಕಾರ್ಯಕಲಾಪಗಳಿಗೆ ನನ್ನನ್ನು ಆಹ್ವಾನಿಸಿಲ್ಲ ಎಂದರು. ಮಂದಿರದಲ್ಲಿ ಹೊಸ ಅರ್ಚಕರನ್ನು ತೆಗೆದುಕೊಂಡು ಯಾವೊಬ್ಬ ಸದಸ್ಯರಿಗೂ ತಿಳಿಸದೇ ಹಾಗೂ ಸಭೆಯಲ್ಲಿ ಚರ್ಚಿಸದೇ ಕೆಲಸಕ್ಕೆ ತಗೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಮಹಾದೇಸ ಮಾಶ್ಯಾಳ ಅವರು ದೇವಸ್ಥಾನದ ಆಫೀಸಿನ ಕೌಂಟರನಲ್ಲಿ ಕುಳಿತುಕೊಳ್ಳುವುದು ಹಾಗೂ ಅವರ ಕುಟುಂಬದವರು ಬಂದು ಮ್ಯಾನೇಜರ್ ಅವರಿಂದ ಪ್ರತಿನಿತ್ಯ 1000 ಹಾಗೂ 2000 ಹಣವನ್ನು ಪಡೆದುಕೊಂಡು ಹೋಗುತ್ತಿದ್ದರು ಇದನ್ನು ಪ್ರಶ್ನಿಸಿದ್ದಕ್ಕೆ ಮ್ಯಾನೇಜರ್ ಹರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದರು. ಮಹಾದೇವ ಮಾಶ್ಯಾಳ ಅವರು ಮೆಸ್ ನಡೆಸುತ್ತಿದ್ದು, ಮಂದಿರಕ್ಕೆ ಬರುವ ಅಕ್ಕಿ, ಬೆಳೆ, ಬೆಲ್ಲವನ್ನು ಮೆಸ್ ನಡೆಸಲು ತೆಗೆದುಕೊಂಡು ಹೋಗಿರುವುದನ್ನು ನನ್ನ ಕಣ್ಣಾರೆಯೇ ನೋಡಿದ್ದೇನೆ ಇದರ ಕುರಿತು ಒಂದು ವರ್ಷದ ಸಿಸಿ ಕ್ಯಾಮರಾ ಪುಟೇಜ್ ಪರಿಶೀಲನೆ ನಡೆಸಬೇಕು ಎಂದು ಅವರು ಆಗ್ರಹಿಸಿದರು. ಮಂದಿರದ ಅಂಗಡಿಯ ವ್ಯಾಪಾರ ಹೆಚ್ಚಿಸಲು ಪುಟ ಪಾತ್ ಮೇಲಿನ ಅಂಗಡಿಕಾರರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಅವರು ಹೇಳಿದರು. ಅರ್ಚಕರಾದ ಪಿ.ಜಿ.ಮುನವಳ್ಳಿ ಅವರಿಗೆ ಡಾ.ಮೋಹನಕುಮಾರ, ಮಹಾದೇವ ಮಾಶ್ಯಾಳ ಅವರು ತಮ್ಮ ವೈಯಕ್ತಿಕ ಸ್ವಾರ್ಥಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ ಎಂದರು. ನಾಳೆ ನಡೆಯಲಿರುವ ಸಾಮಾನ್ಯ ಸಭೆಗೆ ನನಗೆ ಆಹ್ವಾನಿಸಿದ್ದಾರೆ ನಾಳೆಯೇ ಈ ಬಗ್ಗೆ ಚರ್ಚೆ ನಡೆಸಲಿದ್ದೇನೆ ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಸದಾನಂದ ನಿರಂಜನ, ನಾರಾಯಣಸಾ ನಗರೇ, ಅಮೃತ ಮಮರಡಿ ಸೇರಿದಂತೆ ಇತರರು ಇದ್ದರು.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





