ಬೆಂಗಳೂರು- ನಗರದ ಕಾಂಗ್ರೆಸ್ ಪಕ್ಷದ ಸಿ ಎಲ್ ಪಿ ಸಭೆಯಲ್ಲಿ ಕೆಲ ಶಾಸಕರು ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರ ಜೊತೆ ಇಂದು ಪಕ್ಷದ ಮುಖಂಡರು ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಭೆ ಕರೆಯಲಾಗಿತ್ತು. ಆದ್ರೆ ಸಭೆಯ ಮದ್ಯೆದಲ್ಲಿ ಶಾಸಕ ಬಿಸಿ ಪಾಟೀಲ್ ಹೊರ ನಡೆದಿದ್ದಾರೆ. ನಂತರ ಬಿಸಿ ಪಾಟೀಲ್ ಹೊರ ಹೋದ ಬಗ್ಗೆ ಪ್ರಶ್ನೆ ಮಾಡಿದ ಮಾಧ್ಯಮದ ಮೇಲೆ ಮಾಜಿ ಸಿಎಮ್ ಸಿದ್ದರಾಮಯ್ಯ ಕೆಂಡ ಮಂಡಲರಾದರು. ನಿತ್ಯ ಕರ್ಮಕ್ಕೂ ಹೋದರೂ ನಮ್ಮ ಮುಂದೆ ಹೇಳಿ ಹೋಗಬೇಕಾ ಎಂದು ಪ್ರಶ್ನೆ ಮಾಡಿದರು. ಆದ್ರೆ ಬಿಸಿ ಪಾಟೀಲ್ ಸಭೆಯಿಂದ ನೇರವಾಗಿ ತಮ್ಮ ಕಾರಿನ ಕಡೆ ಹೋಗುವಾಗ ಸಚಿವ ಜಮೀರ್ ಅಹಮದ್ ಬಂದು ಸಮಾಧಾನ ಮಾಡಿದರೂ ಸಹ ಯಾವುದೇ ರೀತಿಯ ವಿಷಯ ತಿಳಿಸದೇ ಬಿಸಿ ಪಾಟೀಲ್ ತಮ್ಮ ಬೇಸರ ಹೊರಹಾಕಿ ಹೋಗಿದ್ದು ಕಾಂಗ್ರೆಸ್ ಪಕ್ಷದಲ್ಲಿ ಸಮಸ್ಯೆ ಇನ್ನೂ ಉಲ್ಬಣಗೊಂಡಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಇವೆಲ್ಲ ಅರಿತ ನಾಯಕರು ಈಗ ಒಬ್ಬೋಬ್ಬರೆ ಶಾಸಕರನ್ನು ಕರೆದು ಪ್ರತ್ಯೇಕ ಮಾತುಕತೆ ನಡೆಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





