Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ತಂದೆಯನ್ನೇ ಕೊಂದ ಕ್ರೂರಿ ಮಗ

ಬೆಳಗಾವಿ : ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದಲ್ಲಿ ಬೆಳಂಬೆಳಿಗ್ಗೆ ಕ್ರೂರಿ ಮಗನೊಬ್ಬ ತನ್ನ ಹೆತ್ತ ತಂದೆಯನ್ನೆ ಇಳಿಗೆ ಮನೆಯಿಂದ ಇರಿದು, ತಲೆ ಮತ್ತು ಕಾಲುಗಳನ್ನು ತುಂಡಾಗಿ ಕತ್ತರಿಸಿರುವ ಘಟನೆ ನಡೆದಿದ್ದು ಇಡಿ ಗ್ರಾಮವನ್ನೇ ಬೆಚ್ಚಿಬೀಳಿಸಿದೆ.
ಕೊಲೆಯಾದ ವ್ಯಕ್ತಿ 60ವರ್ಷದ ಶಂಕ್ರೆಪ್ಪಾ ಕುಂಬಾರ ನಿವೃತ್ತ ಸಶಸ್ತ್ರ ಪಡೆ ಪೋಲಿಸ್ ಅಧಿಕಾರಿ. ಸಿದ್ದೇಶ್ವರ ನಗರದ ನಿವಾಸಿ. ಶಂಕ್ರೆಪ್ಪಾ ಅವರು 3 ತಿಂಗಳಿದ್ದೆ ಪೋಲಿಸ್ ಸೇವೆಯಿಂದ ನಿವೃತ್ತಿಗೊಂಡಿದ್ದರು. ನಿನ್ನೆ ಇವರ ಮಗ ರಘುವೀರ ಸದಾ ಮೊಬೈಲ್ನಲ್ಲಿ ಮಗ್ಣಾಗಿದ್ದನನ್ನು ಕಂಡು ಬುದ್ದಿವಾದ ಹೇಳಿದ್ದಾರೆ. ಇದಕ್ಕೆ ಕುಪಿತನಾದ ಮಗ ಅಕ್ಕಪಕ್ಕದವರ ಮನೆಯ ಕಿಟಕಿ ಗಾಜುಗಳನ್ನು ಒಡೆದು ರಂಪಾಟ ಮಡಿದ್ದಾನೆ. ನೆರೆಹೊರೆಯರು ಪೋಲಿಸ್ ಠಾಣೆ ದೂರು ನೀಡಿದ್ದಾರೆ. ನಂತರ ರಘುವೀರ ಮತ್ತು ಅವರ ಪಾಲಕರನ್ನು ಕರೆಸಿದ ಪೊಲೀಸರು ಆತನಿಗೆ ಬುದ್ದಿವಾದ ಹೇಳಿ ಕಳಿಸಿದ್ದಾರೆ.
ಆದರೆ ಮನೆಗೆ ತೆರಳಿದ ಇತ ರಾತ್ರಿ 12 ಗಂಟೆಯಾದರೂ ಮೊಬೈಲನಲ್ಲೆ ಮಗ್ನನಾಗಿದ್ದನು. ಇದನ್ನು ಕಂಡ ತಂದೆ ಬೈದಿದ್ದಾರೆ. ನಂತರ ಮಲಗಿದ ಮಗ ಇಂದು ಬೆಳಗ್ಗೆ 5 ಗಂಟೆಗೆ ತನ್ನ ತಾಯಿಯನ್ನು ಮತ್ತೊಂದು ರೂಮಿನಲ್ಲಿ ಕೂಡ ಹಾಕಿದ್ದಾನೆ. ಕೈಗೆ ಸಿಕ್ಕ ಇಳಿಗೆ ಮನೆಯಿಂದ ತಂದೆಯನ್ನು ಇರಿದ್ದಾನೆ. ನಂತರ ಕೆಳಗೆ ಬಿದ್ದ ತಂದೆ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ತಲೆ ಮತ್ತು ಕಾಲು ಬೇರ್ಪಡಿಸುತ್ತಿರುವ ಸಮಯದಲ್ಲಿ ವಿಷಯ ತಿಳಿದ ಪೋಲಿಸರು ಸ್ಥಳಕ್ಕೆ ಆಗಮಿಸಿದಕ್ಕೆ ತನ್ನ ಕೃತ್ಯ ನಿಲ್ಲಿಸಿದ್ದಾನೆ. ಪೋಲಿಸರು ವಶಕ್ಕೆ ಪಡೆದುಕೊಂಡರು ನಾನು ಇನ್ನು ನನ್ನ ತಂದೆಯನ್ನು ಕತ್ತರಿಸಬೇಕೇಂದು ಗೊಗೇರದ್ದಿದ್ದಾನೆ. ತಕ್ಷಣ ಕಾಕತಿ ಪಿಐ ಶ್ರೀಶೈಲ ಕೌಜಲಗಿ ಸ್ಥಳಕ್ಕಾಗಮಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಷಯ ತಿಳಿದ ಎಸಿಪಿ ಶಿವಾರೆಡ್ಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಘಟನೆಯ ವಿವರ ಪಡೆದಿದ್ದು, ಹೆಚ್ಚಿನ ತನಿಖೆಗೆ ಸೂಚಿಸಿದ್ದಾರೆ.

Share News

About admin

Check Also

ಮಹಿಳೆಯ ಬೆರಳು ಕತ್ತರಿಸಿ ಚಿನ್ನಾಭರಣ ದರೋಡೆ ಮಾಡಿದ್ದ ಇಬ್ಬರ ಬಂಧನ

ಆರ್ಕೆಸ್ಟ್ರಾ ನೋಡಿಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿ, ಲಾಂಗ್‌ನಿಂದ ಹಲ್ಲೆ ಮಾಡಿ, ಸರಗಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಖದೀಮರನ್ನು ಗಿರಿನಗರ …

Leave a Reply

Your email address will not be published. Required fields are marked *