ಹುಬ್ಬಳ್ಳಿ : ಬಿಸಿಲಿನ ಬೇಗೆಯಿಂದ ಬೆಂದಿದ್ದ ವಾಣಿಜ್ಯ ನಗರಿಯಲ್ಲಿ ಗುಡುಗು ಸಹಿತ ಭಾರೀ ಮಹಿಳೆಯಿಂದಾಗಿ ಕೆಲ ಕಾಲ ತಂಪಾದ ವಾತಾವರಣ ನಿರ್ಮಾಣವಾಯಿತು.
ಇಂದು ಸಂಜೆ ಸುರಿದ ಬಾರಿ ಮಳೆಯಿಂದಾಗಿ ನಗರದ ಜನತೆ ಕೂಲ್ ಕೂಲ್ ಆದರು. ಛತ್ರಿ ಮೊರೆ ಹೋದ ಸಾರ್ವಜನಿಕರು ಮಳೆಯಲ್ಲಿಯೇ ಮನೆಯತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯಗಳು ಕಂಡು ಬಂದವು. ವಾಹನ ಸವಾರರು ಮಳೆಯಲ್ಲಿ ನೆನದು ಸವಾರಿ ಮಾಡಿದರು.
ನಗರದಾದ್ಯಂತ ಬಾರೀ ಮಳೆಯಿಂದಾಗಿ ತಗ್ಗು ಪ್ರದೇಶದ ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಮನೆ ನಿವಾಸಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಇನ್ನೂ ಭಾರತ ರತ್ನ, ಡಾ. ಬಿ.ಆರ್. ಅಂಬೇಡ್ಕರ್ ಅವರ 131 ನೇ ಜಯಂತ್ಯೋತ್ಸವ ಅಂಗವಾಗಿ ಮೆರವಣಿಗೆ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಕಾರ್ಯಕ್ರಮಕ್ಕೆ ಮಳೆರಾಯ ಅಡ್ಡ ಪಡಿಸಿರೇ, ಸೆಕೆಯಿಂದ ದಂಗಾಗಿದ್ದ ಜನತೆಗೆ ತಂಪಾದ ಅನುಭವ ನೀಡಿದಂತಾಯಿತು.
bigtvnews | Hubli Dharwad News | Kannada News | Karnataka News Hubli News | News In Hubli | Local news

