ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಲು ಜೆಡಿಎಸ್ ಸಿದ್ಧತೆ ನಡೆಸಿದ್ದು, ಪ್ರಬಲ ಸಮುದಾಯಗಳನ್ನು ಸೆಳೆಯಲು ರಣತಂತ್ರ ಹೂಡಲಾಗಿದೆ. ದೊಡ್ಡ-ದೊಡ್ಡ ಸಮುದಾಯ ಸೆಳೆಯಲು ಪ್ಲಾನ್ ಶುರುವಾಗಿದ್ದು, ಉತ್ತರ ಕರ್ನಾಟಕದ ಲಿಂಗಾಯತ ಮತ ಸೆಳೆಯಲು ಇಂದಿನಿಂದ ವರ್ಕೌಟ್ ಮಾಡಲಾಗುತ್ತಿದೆ. ಲಿಂಗಾಯತ ಮುಖಂಡರ ಜೊತೆ ಇಂದು ಕುಮಾರಸ್ವಾಮಿ ಬೆಂಗಳೂರಿನ JDS ಕಚೇರಿಯಲ್ಲಿ ಮಧ್ಯಾಹ್ನ 1 ಗಂಟೆಗೆ ಮಹತ್ವದ ಸಭೆ ನಡೆಸಲಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸೀಟ್ ಗೆಲ್ಲಲು HDK ಪ್ಲಾನ್ ಮಾಡಿದ್ದು, ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಪ್ರಾಬಲ್ಯ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರದ್ದೇ ಪ್ರಾಬಲ್ಯವಿದ್ದು, ಪಂಚರತ್ನ ಸಮಾವೇಶದ ಮೂಲಕ ಮುಖಂಡರ ಸೆಳೆಯೋ ಪ್ಲಾನ್ ನಡೆಸಲಾಗಿದೆ. ಉತ್ತರ ಕರ್ನಾಟಕದ ಲಿಂಗಾಯತ ಮುಖಂಡರನ್ನು ಸೆಳೆಯಲು ತಂತ್ರ ರೂಪಿಸಲಾಗಿದೆ. ಮುಖಂಡರ ಸೆಳೆಯಲು ಜೆಡಿಎಸ್ ಶಾಸಕರಿಗೆ ಟಾರ್ಗೆಟ್ ನೀಡುವ ಹೆಚ್ಡಿಕೆ, JDS ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಶಾಸಕ ವೆಂಕಟರಾವ್ ನಾಡಗೌಡ ಸಾಥ್ ನೀಡಲಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

