ಧಾರವಾಡ : ತಾಂತ್ರಿಕ ದೋಷ ಹಿನ್ನಲೆ BRTS ಚಿಗರಿ ಬಸ್ ನ ಇಂಜಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ.
ಧಾರವಾಡ ಎಸ್.ಡಿ.ಎಮ್ ದಂತ ವೈಧ್ಯಕೀಯ ಮಹಾವಿದ್ಯಾಲಯ ಬಳಿ ಈ ಘಟನೆ ನಡೆದಿದ್ದು, ಧಾರವಾಡದಿಂದ ಹುಬ್ಬಳ್ಳಿಯ ಕಡೆಗೆ ಹೊರಟಿದ್ದ BRTS ಚಿಗರಿ ಬಸ್ ನ ಟೈಯರ್ ಬಳಿ ಮೊದಲು ಬೆಂಕಿ ಕಂಡು ಬಂದಿದೆ. ಇದನ್ನ ಗಮನಿಸಿದ ಬಸ್ ಚಾಲಕ ತಕ್ಷಣ ಬಸ್ ನಿಲ್ಲಿಸಿ, ಟೈಯರ್ ಬಳಿ ಕಂಡು ಬಂದಿದ್ದ ಬೆಂಕಿಯನ್ನ ನಂದಿಸಿದ್ದಾನೆ. ಈ ವೇಳೆಯಲ್ಲಿ ಬಸ್ ನ ಹಿಂಬದಿಯಿರುವ ಇಂಜಿನಲ್ಲಿಯೂ ಬೆಂಕಿ ಕಂಡು ಬಂದಿದ್ದು, ತಕ್ಷಣ ಪ್ರಯಾಣಿಕರನ್ನ ಸುರಕ್ಷಿತವಾಗಿ ಕೆಳಗೆ ಇಳಿಸಿದ್ದು, ಇಂಜಿನ್ ಭಾಗದಲ್ಲಿ ಕಂಡು ಬಂದಿದ್ದ ಬೆಂಕಿನ್ನ ನಂದಿಸುವಲ್ಲಿ ಯಶಸ್ವಿಯಾಗಿದ್ದಾನೆ.
ಘಟನೆಯಿಂದಾಗಿ ಕೆಲ ಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತಾದರೂ ಚಾಲಕ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

