ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ವಂಚನೆ ಮಾಡುವುದು ಹೊಸತೇನೂ ಅಲ್ಲ ಸಾಕಷ್ಟು ಮೋಸದ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಫೇಸ್‌ಬುಕ್ ಮೂಲಕ ಯುವಕನನ್ನು ಪರಿಚಿಯಿಸಿಕೊಂಡು ಅಮೆರಿಕದಿಂದ ಬರುತ್ತಿದ್ದೇನೆಂದು ನಂಬಿಸಿ ಯುವತಿ
59,200 ರೂ. ವರ್ಗಾಯಿಸಿಕೊಂಡು ಆತನಿಗೆ ನಂಬಿಸಿ ನಂಬಿಸಿ ಕುತ್ತಿಗೆಯನ್ನು ಮುರಿದಿರುವ ಘಟನೆ ನಡೆದಿದೆ.
ಇಲ್ಲಿಯ ಶಾಂತಿನಗರದ ನಿಖಿಲ್ ಶಾಹ ಅವರಿಗೆ ಅಶರ್ ಡಾಮಿನ್ ಎಂಬ ಯುವತಿ ಫೇಸ್‌ಬುಕ್ ರಿಕ್ವೆಸ್ಟ್ ಕಳುಹಿಸಿದ್ದಳು. ರಿಕ್ವೆಸ್ಟ್‌ಗೆ ನಿಖಿಲ್ ಒಪ್ಪಿಗೆ ಸೂಚಿಸಿದ್ದರು. ಬಳಿಕ ನಿಖಿಲ್ ಸ್ನೇಹ ಸಂಪಾದಿಸಿದ ಯುವತಿ ವಾಟ್ಸ್‌ಆ್ಯಪ್ ನಂಬರ್ ಪಡೆದಿದ್ದಳು. ತನ್ನ ಬಳಿ ಇರುವ ಯುಎಸ್ ಡಾಲರ್ ಅನ್ನು ಹುಬ್ಬಳ್ಳಿಯಲ್ಲಿ ಹೂಡಿಕೆ ಮಾಡಲು ಬರುತ್ತಿದ್ದೇನೆ ಎಂದು ನಂಬಿಸಿದ್ದಳು.
ನನ್ನ ಬಳಿ ಯೆಲ್ಲೋ ಕಾರ್ಡ್ ಇಲ್ಲದ ಕಾರಣ ಹಾಗೂ ಯುಎಸ್ ಡಾಲರ್ ಇರುವ ಕಾರಣಕ್ಕೆ ದೆಹಲಿ ಏರ್‌ಪೋರ್ಟ್‌ನಲ್ಲಿ ಕಸ್ಟಡಿಗೆ ಹಾಕಿದ್ದಾರೆ. ಬಿಡಿಸಿಕೊಳ್ಳಲು ಮತ್ತು ಹುಬ್ಬಳ್ಳಿಗೆ ವಿಮಾನ ಟಿಕೆಟ್ ಮತ್ತಿತರ ನೆಪ ಹೇಳಿ ನಿಖಿಲ್ ಅವರ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾಳೆಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

