ಅವತ್ತು ಬ್ರಿಟಿಷರ ವಿರುದ್ಧ ಮೇಕೆದಾಟುಗಾಗಿ ಹೋರಾಟ ನಡೆದಿತ್ತು. ಇವತ್ತು ಬಿಜೆಪಿ, ಜೆಡಿಎಸ್ ವಿರುದ್ಧ ಹೋರಾಟ ನಡೀತಾ ಇದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಇಲ್ಲಿರೋ ಎಲ್ಲರ ವಿಡಿಯೋ, ಅಡ್ರೆಸ್ ಕಳುಹಿಸಿಕೊಡ್ತೀನಿ. ಎಸ್ಪಿಗಳೇ, ಗೃಹಸಚಿವರೇ ನಿಮಗೆ ತಾಕತ್ ಇದ್ರೆ ಕ್ರಮ ತಗೊಳ್ಳಿ ಅಂತ ಸವಾಲ್ ಎಸೆದ್ರು.. ಯಾಕಂದ್ರೆ ನಿಮ್ಮ ನಿರ್ಬಂಧವೇ ಅನ್ಯಾಯ.. ಸಂವಿಧಾನಕ್ಕೆ ವಿರುದ್ಧವಾಗಿದ್ದಾಗಿದೆ. ಹೀಗಾಗಿ ಅದಕ್ಕೆಲ್ಲಾ ಹೆದರೋ ಮಕ್ಕಳು ನಾವಲ್ಲ ಅಂತ ಹೇಳಿದ್ದಾರೆ. ಜೊತೆಗೆ ಪ್ರತಿಭಟನೆಯಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ತಿಳಿಸಿದ ಅವರು, ಕೊರೋನಾ ರೂಲ್ಸ್ ಪಾಲಿಸುವಂತೆಯೂ ಮನವಿ ಮಾಡಿದ್ರು.
bigtvnews | Hubli Dharwad News | Kannada News | Karnataka News Hubli News | News In Hubli | Local news





