ರಾಮನಗರ: ಪಾದಯಾತ್ರೆ ಮಾಡಬಾರದು ಎಂದು ನೋಟೀಸ್ ನೀಡಿದ್ದು ನಿಜ. ಅದು ಕಾನೂನು ಬದ್ಧ ನೋಟೀಸ್ ಅಲ್ಲ. ಸೆಕ್ಷನ್ 144 ಅನ್ನು ಯಾವ ರೀತಿ ಜಾರಿಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಸಿದ್ದರಾಮಯ್ಯ ಅವರು ಆರೋಗ್ಯ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದು ಸಂಜೆ ಬರುವುದಾಗಿ ತಿಳಿಸಿದರು. ನಾನೇ ಅವರಿಗೆ ವಿಶ್ರಾಂತಿ ಪಡೆದು ನಾಳೆ ಬರುವಂತೆ ಹೇಳಿದೆ. ಉಳಿದ 9 ದಿನಗಳ ಪಾದಯಾತ್ರೆಗೆ ಸರ್ಕಾರ ಅವಕಾಶ ನೀಡುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಅವರು ಏನಾದರೂ ಮಾಡಲಿ, ನಮ್ಮ ನಿರ್ಧಾರ ಅಚಲ.
ಇಂದು ದೊಡ್ಡಾಲ ಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದಂತ ಅವರು, ನಮ್ಮ ಪಾದಯಾತ್ರೆ ನಿಲ್ಲಿಸಲು ಈ ರೀತಿ ನಿಯಮ ಮಾಡಿದ್ದಾರೆ. ಈ ಪಾದಯಾತ್ರೆಗೆ ಯಾರೆಲ್ಲ ಬಂದಿದ್ದಾರೋ ಅವರ ವೋಟರ್ ಐಡಿ ನೀಡುತ್ತೇನೆ, ವಿಡಿಯೋ ಕಳುಹಿಸಿಕೊಡುತ್ತೇನೆ. ಕೇವಲ ರಾಮನಗರ ಮಾತ್ರವಲ್ಲ, ಬೆಂಗಳೂರಿನಲ್ಲಿ ಬಿಜೆಪಿ ನಾಯಕರು ಓಡಾಡಿರುವ ವಿಡಿಯೋ ಕೂಡ ಕೊಡುತ್ತೇನೆ. ಅವರ ಮೇಲೂ ಪ್ರಕರಣ ದಾಖಲಿಸಲಿ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

