Breaking News

ಯಾದಗಿರಿಯಲ್ಲಿ ಪವರ್ ಸ್ಟಾರ್ ಪುತ್ಥಳಿ ಪ್ರತಿಷ್ಠಾಪನೆ

ಯಾದಗಿರಿ:  ಅಪ್ಪು ಇಲ್ಲದಿದ್ದರು ನಿತ್ಯವು ಪುನೀತ್ ಸ್ಮರಣೆ ಮಾಡುದೆ ಇರುವ ಅಭಿಮಾನಿಗಳೇ ಇಲ್ಲ. ಹೀಗಾಗಿ ,ಅಪ್ಪು ಮೇಲಿರುವ ಅಭಿಮಾನದಿಂದ ಪುನೀತ್ ರಾಜಕುಮಾರ ಅವರ ಅಭಿಮಾನಿಗಳು ಪುತ್ಥಳಿ ಪ್ರತಿಷ್ಠಾಪನೆ ಮಾಡಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಮೊದಲನೇ ಅಪ್ಪು ಮೂರ್ತಿಯನ್ನು ಯಾದಗಿರಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಎಂ. ಗ್ರಾಮದ ಅಪ್ಪು ಅಭಿಮಾನಿ ಸ್ನೇಹಿತರು ಕೂಡಿ ಗ್ರಾಮದಲ್ಲಿ ಪುನೀತ್ ಅವರ 6 ಅಡಿ ಉದ್ದವಿರುವ ಅಪ್ಪು ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.

ಅಪ್ಪು ಅಭಿಮಾನಿಗಳಾದ ಹಣಮಂತ ಕೊರಿ, ಅಂಜನೇಯ, ಮಲ್ಲು, ಶಿವಶಂಕರ, ಮಹೇಶ ಹಾಗೂ ಮಹಾದೇಶ ಅವರು ಕೂಡಿಕೊಂಡು ವ್ಯಯಕ್ತಿಕವಾಗಿ ತಾವೆ ಹಣ ಸಂಗ್ರಹಿಸಿ ಅಪ್ಪು ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಅಪ್ಪು ಅವರ ಮೇಲಿನ ಅಭಿಮಾನ ಮೆರೆದಿದ್ದಾರೆ.




Share News

About admin

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *