Breaking News

ವೀರಶೈವ ಸಂಪ್ರದಾಯದಂತೆ ಪತ್ನಿ ಸಮಾಧಿ ಪಕ್ಕದಲ್ಲಿ ಕಣವಿ ಅಂತ್ಯ ಸಂಸ್ಕಾರ


ಧಾರವಾಡ: ಇಂದು ನಿಧನರಾದ ಕವಿ ನಾಡೋಜ ಚೆನ್ನವೀರ ಕಣವಿ ಅವರ ಅಂತ್ಯಸಂಸ್ಕಾರ ಧಾರವಾಡ ಹೊರವಲಯದಲ್ಲಿರುವ ಕಣವಿ ಕುಟುಂಬದ ಸೃಷ್ಟಿ ಫಾರ್ಮ್​ ಹೌಸ್​ನಲ್ಲಿ ವೀರಶೈವ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಅವರ ಹಿರಿಯ ಪುತ್ರ ಶಿವಾನಂದ ಕಣವಿ ಅವರು ಅಂತಿಮ ವಿಧಿ-ವಿಧಾನಗಳನ್ನು ಕೈಗೊಂಡರು. ಕಣವಿ ಅವರ ಇಚ್ಛೆಯಂತೆ ಪತ್ನಿ ಶಾಂತಾದೇವಿ ಅವರ ಸಮಾಧಿ ಬಳಿಯೇ ಅವರ ಅಂತಿಮಕ್ರಿಯೆ ನಡೆಸಲಾಯಿತು. ಸರ್ಕಾರದ ಸಕಲ ಗೌರವದೊಂದಿಗೆ ಅವರ ಅಂತ್ಯಸಂಸ್ಕಾರ ನಡೆದಿದ್ದು, ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು.

ಅಂತ್ಯಸಂಸ್ಕಾರ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಾಸಕ ಅರವಿಂದ ಬೆಲ್ಲದ ಮಾತ್ರವಲ್ಲದೆ ಅನೇಕ ಸಾಹಿತಿಗಳು, ಜನಪ್ರತಿನಿಧಿಗಳು,‌ ಮಠಾಧೀಶರು ಪಾಲ್ಗೊಂಡು ಅಂತಿಮ ದರ್ಶನವನ್ನು ಪಡೆದರು.

Share News

About admin

Check Also

ಬರೋಬ್ಬರಿ 1 ಕೋಟಿ ರೂ.ಗೆ ರೆಡ್ ಸ್ಯಾಂಡ್ ಬೋವಾ ಮಾರಲು ಯತ್ನಿಸಿದವ ಸಿಸಿಬಿ ಬಲೆಗೆ..!

ಬೆಂಗಳೂರು: ಅಪರೂಪದ ‘ರೆಡ್ ಸ್ಯಾಂಡ್ ಬೋವಾ’ ಹಾವು ಹಾಗೂ ಕೋರಲ್ ಸೀ ಫ್ಯಾನ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಎರಡು …

Leave a Reply

Your email address will not be published. Required fields are marked *