ಮುಂಬಯಿ: ಅಪರೂಪದ ರಕ್ತದ ಕಾಯಿಲೆಗೆ ಚಿಕಿತ್ಸೆ ನೀಡಲು ಅಸ್ಥಿ ಮಜ್ಜೆಯ ಕಸಿ ಅಗತ್ಯವಿರುವ 11 ವರ್ಷದ ಉದಯೋನ್ಮುಖ ಕ್ರಿಕೆಟಿಗನಿಗೆ 31 ಲಕ್ಷ. ರೂ. ನೆರವು ನೀಡುವ ಮೂಲಕ ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಮಾನವೀಯತೆ ಮೆರೆದಿದ್ದಾರೆ.
“ವರದ್ ನಲವಡೆ ಅವರ ಸ್ಥಿತಿಯ ಬಗ್ಗೆ ನನಗೆ ತಿಳಿದಾಗ ನನ್ನ ತಂಡವು “ಗಿವ್ ಇಂಡಿಯಾ’ದೊಂದಿಗೆ ಸಂಪರ್ಕದಲ್ಲಿತ್ತು. ಇದರಿಂದ ನಾವು ಅವರಿಗೆ ಸಹಾಯ ಮಾಡಲು ಸಾಧ್ಯವಾಯಿತು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದಕ್ಕೆ ನನಗೆ ಖುಷಿಯಾಗಿದೆ. ಅವರು ಬೇಗನೆ ಚೇತರಿಸಿಕೊಂಡು ಕನಸುಗಳನ್ನು ಈಡೇರಿಸಿಕೊಳ್ಳಲಿ’ ಎಂದು ರಾಹುಲ್ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

