Breaking News

ಸಿಡಿಲು ಬಡಿದು ಕುರುಗಳ ಮಾರಣ ಹೋಮ : ವ್ಯಕ್ತಿಗೆ ಗಂಭೀರ ಗಾಯ


ನವಲಗುಂದ : ವರುಣನ ಆರ್ಭಟಕ್ಕೆ ರೈತರು ಕಂಗಾಲು ಆಗಿದ್ದಾರೆ. ಕುರಿ ಮೇಯಿಸುತ್ತಿದ್ದ ಕುರಿಗಾಯಿಗಳಿಗೆ ಮತ್ತು ಕುರಿಗಳಿಗೆ ಸಿಡಿಲು ಬಡಿದ ಪರಿಣಾಮ ಕುರಿಗಾಯಿಗಳು ಗಂಭೀರವಾಗಿ ಗಾಯಗೊಂಡಿದ್ದು , ಸ್ಥಳದಲ್ಲೇ 15 ಕುರಿಗಳು ಮೃತಪಟ್ಟಿರುವ ಘಟನೆ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಹೊಲದಲ್ಲಿ ನಡೆದಿದೆ.

ಸುರಿಯುತ್ತಿದ್ದ ಬಾರಿ ಮಳೆಯಿಂದ ತಪ್ಪಿಸಿಕೊಳ್ಳಲು ಮರದ ಕೆಳಗೆ ಕುರಿಗಳೊಂದಿಗೆ ನಿಂತ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ.ತಾಲ್ಲೂಕಿನ ಗೊಬ್ಬರಗುಪ್ಪಿ ಗ್ರಾಮದ ಸಹೋದರರಾದ 18 ವರ್ಷ ವಯಸ್ಸಿನ ದೇವರಾಜ ದ್ಯಾಮಪ್ಪ ಪೂಜಾರ ಹಾಗೂ ಕರಿಯಪ್ಪ ದ್ಯಾಮಪ್ಪ ಪೂಜಾರ . ಇನ್ನು ದೇವರಾಜ ದ್ಯಾಮಪ್ಪ ಪೂಜಾರ ಎಂಬುವವರಿಗೆ ಗಂಭೀರ ಗಾಯವಾಗಿದ್ದು , ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ .

Share News

About admin

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *