ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಜಾಬ್ ವಿಷಯವಾಗಿ ಶ್ರೀರಾಮುಖ್ಯಸ್ಥಮಸೇನೆ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು , ಮಾತಿನ ಭರಾಟೆಯಲ್ಲಿ ಸಿದ್ದರಾಮಯ್ಯನವರು , ಹಿಂದೂ ಹೆಣ್ಣು ಮಕ್ಕಳು ತಲೆ ಮೇಲೆ ದುಪ್ಪಟ್ಟಾ ಹಾಕೇ ಇಲ್ವಾ ? ಹಿಂದೂ ಸ್ವಾಮೀಜಿಗಳು ತಲೆ ಮೇಲೆ ಪೇಟಾ ಹಾಕೇ ಇಲ್ವಾ ? ಎಂಬ ಪ್ರಶ್ನೆ ಕೇಳಿ ಮತ್ತೆ ವಿವಾದ ಸೃಷ್ಟಿಸಿದ್ದಾರೆ ಎಂದರು.
ಸಿದ್ದರಾಮಯ್ಯನವರು ನೂರು ಕೋಟಿ ಹಿಂದೂಗಳಿಗೆ
ಅಪಮಾನ ಮಾಡುವ ಕೆಲಸ ಮಾಡಿದ್ದಾರೆ.ಸಿದ್ದರಾಮಯ್ಯನವರ ಮೇಲೆ ನಮಗೆ ಗೌರವ ಇದೆ . ಆದರೆ , ಮುಸ್ಲಿಂ ಮತಗಳನ್ನು ಪಡೆದುಕೊಳ್ಳುವುದಕ್ಕೋಸ್ಕರ ಹಿಜಾಬ್ ಮತ್ತು ಮಠಾಧಿಪತಿಗಳ ಪೇಟಾಕ್ಕೆ ಹೋಲಿಕೆ ಮಾಡುವ ಕೆಲಸ ಮಾಡಿದ್ದಾರೆ . ಸಿದ್ದರಾಮಯ್ಯನವರು ಮುಸ್ಲಿಂ ಮತಗಳನ್ನು ಪಡೆದುಕೊಳ್ಳಲಿ ಬೇಡ ಎನ್ನುವುದಿಲ್ಲ . ಆದರೆ , ಸಾವಿರಾರು ವರ್ಷಗಳ ಇತಿಹಾಸ ಇರುವ ಮಠಾಧಿಪತಿಗಳ ಪೇಟಾಕ್ಕೆ ಅಪಮಾನ ಮಾಡುವ ಮೂಲಕ ಸಿದ್ದರಾಮಯ್ಯವರು ಅಕ್ಷಮ್ಯ ಅಪರಾಧ ಮಾಡಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

