Breaking News

ಇಂಧನ ಬೆಲೆ ಏರಿಕೆಗೆ ಬೇಸತ್ತ ಸಾರಿಗೆ ಸಂಸ್ಥೆಗಳು

ಹುಬ್ಬಳ್ಳಿ : ಇಂಧನ ಬೆಲೆ ಏರಿಕೆ ಸಾರ್ವಜನಿಕರಿಗೆ ಮಾತ್ರವಲ್ಲದೆ ಸಾರಿಗೆ ಸಂಸ್ಥೆಗಳಿಗೂ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿದ್ದು , ಸಾರಿಗೆ ಸಂಸ್ಥೆ ಬಸ್ ಗಳ ಇಂಧನಕ್ಕಾಗಿ ಬೀದಿಗೆ ಬರುವಂತ ಸ್ಥಿತಿ ನಿರ್ಮಾಣವಾಗಿದೆ.

ಸಾರಿಗೆ ಸಂಸ್ಥೆಗಳ ಪುನಶ್ವೇತನಕ್ಕೆ ಸರ್ಕಾರ ಕಸರತ್ತು ನಡೆಸಿರುವಾಗಲೇ ಸಗಟು ಗ್ರಾಹಕರಾಗಿರುವ ಸಾರಿಗೆ ಸಂಸ್ಥೆಗಳಿಗೆ ಡೀಸೆಲ್ ದರ ಹೆಚ್ಚಳ ದೊಡ್ಡ ಹೊಡೆತ ನೀಡಿದೆ . ಸಗಟು ಗ್ರಾಹಕರಿಗೆ ಪ್ರತಿ ಲೀಟರ್‌ಗೆ 21 ರೂ . ಹೆಚ್ಚಳವಾಗಿದ್ದು , ಡಿಸೌಂಟ್ ಕಳೆದರೂ ಪ್ರತಿ ಲೀಟರ್ ಗೆ 21 ರೂ . ಹೊರೆ ಬೀಳುತ್ತಿದೆ . ಈ ಸಂಕಷ್ಟದಿಂದ ಪಾರಾಗಲು ಹೊರಗಿನ ಬಂಕ್‌ಗಳಿಂದ ಡೀಸೆಲ್ ಹಾಕಿಸುವುದಕ್ಕೆ ಸಾರಿಗೆ ಸಂಸ್ಥೆ ಮುಂದಾಗಿದ್ದು , ಹುಬ್ಬಳ್ಳಿಯ ವಾಯುವ್ಯ ಸಾರಿಗೆ ಘಟಕದ ಬಸ್ ಖಾಸಗಿ ಬಂಕ್ ಗಳಲ್ಲಿ ಇಂಧನ ತುಂಬಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಿವೆ .

ಸಾರಿಗೆ ಸಂಸ್ಥೆಗಳು ನೌಕರರ ವೇತನದಷ್ಟೇ ಹಣವನ್ನು ಡೀಸೆಲ್‌ಗಾಗಿ ಪ್ರತಿ ತಿಂಗಳು ವ್ಯಯಿಸುತ್ತಿದೆ . ನಿತ್ಯವೂ ತೈಲ ಹೆಚ್ಚಳದಿಂದಾಗಿ ಸಂಸ್ಥೆಗಳ ನಷ್ಟದ ಪ್ರಮಾಣ ಹೆಚ್ಚುತ್ತಿದೆ . ನಿತ್ಯ 12 ಲಕ್ಷ ಲೀಟರ್‌ಗೂ ಹೆಚ್ಚು ಡೀಸೆಲ್ ಬಳಸುತ್ತಿದ್ದು , ಈ ಹಂತದಲ್ಲಿ ಪ್ರತಿ ಲೀಟರ್‌ಗೆ 21 ರೂ.ಹೊರೆ ಮತ್ತಷ್ಟು ನಷ್ಟಕ್ಕೆ ಕಾರಣವಾಗುತ್ತಿದೆ . ಹೀಗಾಗಿ ಹೊರಗಿನ ಬಂಕ್ ಗಳಲ್ಲಿ ಪ್ರತಿ ಲೀಟರ್‌ಗೆ 21 ರೂ . ಕಡಿಮೆಯಾಗುವುದರಿಂದ ಖಾಸಗಿ ಬಂಕ್ ಗಳಲ್ಲಿ ಹಾಕಿಸುವ ನಿರ್ಧಾರಕ್ಕೆ ಬಂದಿದೆ .

Share News

About admin

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *