Breaking News

ಸಂತೋಷ ಶೆಟ್ಟಿಗೆ ರಾಜರತ್ನ ಪ್ರಶಸ್ತಿ


ಹುುಬ್ಬಳ್ಳಿ: ನಗರದ ಚೇತನ್ ಫೌಂಡೇಶನ್ ಏಳನೇ ವರ್ಷದಂಗವಾಗಿ ನಡೆದ ‘ಚೇತನ ಸಂಭ್ರಮ’ ದಲ್ಲಿ ಡಾ. ಪುನೀತ್ ರಾಜಕುಮಾರ್ ನೆನಪಿನ ರಾಜರತ್ನ ಪ್ರಶಸ್ತಿಯನ್ನು ಉದ್ಯಮಿ, ಸಮಾಜ ಸೇವಕ, ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತ ಸಂತೋಷ ಆರ್. ಶೆಟ್ಟಿ ನೀಡಿ ಗೌರವಿಸಲಾಯಿತು.

ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ, ಹಿರಿಯ ಸಾಹಿತಿ ಸುರೇಶ ಕೋರಕೊಪ್ಪ, ಸಾಹಿತಿ ಬೇಲೂರ ರಘುನಂದನ್, ಸವಿತಾ ಕುಸುಗಲ್, ಕು. ಖುಷಿ ಟಿಕರೆ, ವಿ.ಜಿ. ಪಾಟೀಲ್, ಸತೀಶ ಕೃಷ್ಣಮೂರ್ತಿ, ಪೀರಸಾಬ ನದಾಫ್, ಪ್ರಕಾಶ ಹೂಗಾರ, ವೀರಭದ್ರಪ್ಪ ಹೂಲಿ, ಪ್ರಮೀಳಾ ಹಟ್ಟಿಹೊಳಿ, ಡಾ. ಸುವರ್ಣಲತಾ ಗದಿಗೆಪ್ಪಗೌಡರ, ಫೌಂಡೇಶನ್ ಅಧ್ಯಕ್ಷ ಚಂದ್ರಶೇಖರ ಮಾಡಲಗೇರಿ ಮುಂತಾದವರು ಇದ್ದರು‌.

ಈ ವೇಳೆ ರಂಗಚೇತನ್, ವನಿತಾ, ಕರುನಾಡ ಚೇತನ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ವಿವಿಧ ಸಾಧಕರಿಗೆ ವಿತರಿಸಲಾಯಿತು.

Share News

About admin

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *