ಹುಬ್ಬಳ್ಳಿ: ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಏ.28 & 29 ರಂದು ರಾಜ್ಯಮಟ್ಟದ ರೈತರು ಮತ್ತು ಕಾರ್ಮಿಕರ ಸಮ್ಮೇಳನವನ್ನು ಧಾರವಾಡದ ಕಡಪಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಮಿತಿಯ ಅಧ್ಯಕ್ಷ ಡಾ.ಟಿ.ಎಸ್.ಸುನೀತ್ ಕುಮಾರ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಏ.28 ರಂದು ಬೆಳಿಗ್ಗೆ 12 ಕ್ಕೆ ಬಂಡಾಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿಗಾಳಾದ ಅಲ್ಲಮ್ಮಪ್ರಭು ಬೆಟ್ಟದೂರು ಆಗಮಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಆಲ್ ಇಂಡಿಯಾ ಕೃಷಕ್ ಖೇತ್ ಮಜ್ದೂರ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಸತ್ಯವಾನ್ ಮಾತನಾಡಲಿದ್ದಾರೆ ಎಂದರು.
ಸಮ್ಮೇಳನ ಉದ್ಘಾಟನೆ ಮುಂಚೆ ಬೆಳಿಗ್ಗೆ 10.30 ಕ್ಕೆ ರೈತರು ಮತ್ತು ಕೃಷಿಕಾರ್ಮಿಕರ ಮೆರವಣಿಗೆ ನಡೆಯಲಿದೆ. ಅಲ್ಲದೇ ಅಂದು ಮುಂಜಾನೆ ನಾಡಿನ ಹಿರಿಯ ಹೋರಾಟಗಾರರಾದ ಎಸ್.ಆರ್.ಹಿರೇಮಠ ಸೂಕ್ತಿ ಪ್ರದರ್ಶನವನ್ನು ಉದ್ಘಾಟನೆ ಮಾಡಲಿದ್ದು, ಅಖಿಲ ಭಾರತ ಕಾರ್ಯದರ್ಶಿಗಳಾದ ಶಂಕರಘೋಷರವರು ಸಂಘಟನೆಯ ಧ್ವಜಾರೋಹಣ ಮಾಡಲಿದ್ದಾರೆ. ಅದೇ ದಿನ ಸಂಜೆ 5 ಕ್ಕೆ ಧಾರವಾಡ ಜಿಲ್ಲಾ ನೌಕರರ ಭವನದಲ್ಲಿ ಪ್ರತಿನಿಧಿ ಎರಡು ದಿನಗಳ ಪ್ರತಿನಿಧಿ ಅಧಿವೇಶನ ನಡೆಯಲಿದ್ದು. ಇದನ್ನು ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಉಮಾ ಉದ್ಘಾಟನೆ ಮಾಡಲಿದ್ದಾರೆ ಎಂದರು.
ಎರಡು ದಿನಗಳ ರಾಜ್ಯಮಟ್ಟದ ರೈತ ಕೃಷಿ ಕಾರ್ಮಿಕರ ಸಂಘಟನೆಯಲ್ಲಿ ರಾಜ್ಯದ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಕೂಲಂಕುಷವಾಗಿ ಚರ್ಚೆ, ಅವುಗಳ ಕಾರಣ ಮತ್ತು ಪರಿಹಾರಗಳ ಕುರಿತು ಚರ್ಚಿಸಲಾಗುವುದು, ತದನಂತರ ರೈತರ ಕೃಷಿಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ನಿಟ್ಟಿನಲ್ಲಿ ಕಾರ್ಯಕ್ರಮ ಮತ್ತು ಹೋರಾಟಗಳನ್ನು ರೂಪಿಸಲು ಯೋಜಿಸಲಾಗುವುದು ಎಂದು ಸುನೀತ್ ಕುಮಾರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ಖಜಾಂಚಿ ನಾಗಮ್ಮಾಳ ವಿ, ಧಾರವಾಡ ಜಿಲ್ಲಾ ಸಮಿತಿ ಅಧ್ಯಕ್ಷೆ ದೀಪಾ, ಕಾರ್ಯದರ್ಶಿ ಶರಣಪ್ಪ ಗೋನವಾರ ಸೇರಿದಂತೆ ಮುಂತಾದವರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

