ಹುಬ್ಬಳ್ಳಿ – ಕರ ಸೇವಕನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಟಾರ್ಗೆಟ್ ಆಗಿರುವ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ ತಹಶೀಲ್ದಾರ್ ಬಗ್ಗೆ ಇವತ್ತು ರಾಜ್ಯಾದ್ಯಂತ ಸಾಕಷ್ಟು ಚರ್ಚೆ ಆಗ್ತಿದೆ.ಕೇವಲ ಮಹಮ್ಮದ್ ರಫೀಕ್ ಅನ್ನೋ ಹೆಸರನ್ನೇ ನೋಡಿ, ಇವರು ಬೇಕಂತಲೇ

ಕರಸೇವಕನನ್ನು ಬಂಧಿಸಿದ್ದಾರೆ ಅಂತ ಕೆಲವರು ಬಿಂಬಿಸಲು ಯತ್ನಿಸ್ತಿದ್ರೆ, ಬಿಜೆಪಿಯಂತೂ ಇವರನ್ನು ಅಮಾನು ಮಾಡಬೇಕು ಅಂತ ಆಗ್ರಹಿಸುತ್ತಿದೆ. ಆದ್ರೆ ವಾಸ್ತವದಲ್ಲಿ ಎಲ್ಲ ತಿಳಿದಂತೆ ಇಲ್ಲ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ ತಹಶೀಲ್ದಾರ್.ಸರ್ವಧರ್ಮ ಸಮರ್ಥಕಮಹಮ್ಮದ್ ರಫೀಕ್ ಮೂಲತಃ ಬಾದಾಮಿ ತಾಲೂಕಿನ ಜಾಲಹಳ್ಳಿ

ಮೂಲದವರು. ಇವರ ಜೀವನ ಶೈಲಿ ಸಂಪೂರ್ಣ ಹಿಂದೂಮಯ. ಈ ಇನ್ಸ್ಪೆಕ್ಟರ್, ಬನಶಂಕರಿ ದೇವಿಯ ಆರಾಧಕ. ಮನೆಯಲ್ಲಿ ಎಲ್ಲ ಹಿಂದೂ ಹಬ್ಬಗಳನ್ನೂ ಅದ್ದೂರಿಯಾಗಿ ಆಚರಣೆ ಮಾಡ್ತಾರೆ. ಗಣೇಶೋತ್ಸವ ವೇಳೆ ಗಣೇನ ಕೂಡಿಸಿ ಭಕ್ತಿಭಾವ ಮೆರಿತಾರೆ. ಯಾವುದೇ ಹಿಂಜರಿತ ಇಲ್ಲದೇ ಹಣೆಗೆ ತಿಲಕವಿಟ್ಟುಕೊಂಡು

ಗಣೇಶೋತ್ಸವ ಆಚರಣೆ ಮಾಡ್ತಾರೆ. ಈ ಹಿಂದೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುತ್ತಿರಲಿಲ್ಲ. ಆದ್ರೆ ಇನ್ಸ್ಪೆಕ್ಟರ್ ತಹಶಿಲ್ದಾರ ಈ ಠಾಣೆಗೆ ಹೋದ ಮೇಲೆ ಇಲ್ಲಿ ಗಣೇಶ ಪ್ರತಿಷ್ಠಾಪನೆ ಪದ್ಧತಿ ಜಾರಿಗೆ ತಂದರು. ಅಷ್ಟೇ ಅಲ್ಲ ಯಾವುದೇ ಭೇದವಿಲ್ಲದೇ ಹಿಂದೂಗಳ ಪ್ರತಿಯೊಂದು ಹಬ್ಬವನ್ನು ಇನ್ಸ್ಪೆಕ್ಟರ್ ಮನೆಯಲ್ಲಿ ಆಚರಣೆ ಮಾಡಲಗುತ್ತೆ ಅನ್ನೋ

ಮಾಹಿತಿ ಇದೆ. ಅಷ್ಟೇ ಅಲ್ಲ ಅವರು ಧಾರ್ಮಿಕ ಮನೋಭಾವದ ಜೊತೆಗೆ, ದಕ್ಷ ಅಧಿಕಾರಿ ಅಂತಾ ಕೂಡ ಹೆಸರುವಾಸಿಯಾಗಿದ್ದಾರೆ. ಸದ್ಯ ಸರ್ಕಾರದ ಆದೇಶದ

ಮೇರೆಗೆ ಶ್ರೀಕಾಂತ್ರನ್ನೂ ಇವರು ಬಂಧಿಸಿದ್ದಾರೆ. ಹೀಗಿದ್ಆಗ, ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಿದ ಅಧಿಕಾರಿಯನ್ನು ಯಾಕೆ ಅಮಾನತು ಮಾಡಬೇಕು ಅನ್ನೋ ಪ್ರಶ್ನೆ..? ಅವಳಿ ನರದಲ್ಲಿ ಮೂಡುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

