ಹುಬ್ಬಳ್ಳಿ: ವ್ಯಕ್ತಿಯೋರ್ವ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಎರಡೂ ಕಾಲುಗಳನ್ನು ಕಳೆದುಕೊಂಡ ಘಟನೆ ಹುಬ್ಬಳ್ಳಿಯ ಕಿಮ್ಸ್ ಹಿಂಭಾಗ ಪ್ರವೇಶ ದ್ವಾರದ ರೈಲ್ವೆ ಮಾರ್ಗದಲ್ಲಿ ನಡೆದಿದೆ.
ಶಾಲಿಮಾರ್- ವಾಸ್ಕೋಡಿಗಾಮಾ ರೈಲಿಗೆ ಹೆಗ್ಗೇರಿ ನಿವಾಸಿಯೊರ್ವ ಸಿಲುಕಿದ್ದು, ರೈಲು ಹುಬ್ಬಳ್ಳಿ ನಿಲ್ದಾಣದಿಂದ ಹೊರಟ ನಾಲ್ಕೈದು ನಿಮಿಷದಲ್ಲಿ ಈ ಘಟನೆ ನಡೆದಿದೆ.
ರೈಲು ಚಲಿಸುತ್ತಿದ್ದ ಹಳಿ ಮೇಲೆ ವ್ಯಕ್ತಿ ನಿಂತಿರುವುದನ್ನು ಲೋಕೋ ಪೈಲೆಟ್ ಗಮನಿಸಿ ಹಾರ್ನ್ ಮಾಡಿದ್ದಾರೆ. ಆದರೆ ವ್ಯಕ್ತಿ ಹಳಿಯ ಮೇಲಿಂದ ಆಚೆ ಸರಿಯದೇ ಅಲ್ಲೇ ನಿಂತಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ರೈಲ್ವೆ ಸಿಬ್ಬಂದಿ ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿದ್ದಾರೆ.
ಎಂಜಿನ್ ಹಾಗೂ ಮೂರ್ನಾಲ್ಕು ಬೋಗಿಗಳು ಕಾಲ ಮೇಲೆ ಹರಿದ ಕಾರಣ ಒಂದು ಕಾಲು ಸಂಪೂರ್ಣ ತುಂಡಾಗಿದ್ದು, ಇನ್ನೊಂದು ಕಾಲು ಅರ್ಧ ತುಂಡಾಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

