ಹುಬ್ಬಳ್ಳಿ: ವಿಧಾನಸಭಾ ಕ್ಷೇತ್ರ ಸೆಂಟ್ರಲ್ 73 ಗ್ರಾಮೀಣ ಹಾಗೂ ಪೂರ್ವ ಜೆಡಿಎಸ್ ಪಕ್ಷದ ವತಿಯಿಂದ ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿಗಳು, ಜನಮನದ ನಾಯಕರು, ರೈತಪರ ಹೋರಾಟಗಾರರಾದ ಎಚ್.ಡಿ. ದೇವೇಗೌಡ ಅವರ 89 ನೇ ಜನ್ಮದಿನಾಚರಣೆ ಅಂಗವಾಗಿ ಹಳೇಹುಬ್ಬಳಿಯ ಶ್ರೀ ಸದ್ಗುರು ಸಿದ್ಧಾರೂಢರ ಮಠದಲ್ಲಿ ಅವರು ನೂರಾರು ವರ್ಷ ಆಯುರಾರೋಗ್ಯಕ್ಕಾಗಿ, ಇನ್ನಷ್ಟು ಹೆಚ್ಚಿನ ಜನಸೇವೆಗಾಗಿ ಪೂಜೆ ಸಲ್ಲಿಸಿ, ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ಕೇಕ್ ಕತ್ತರಿಸುವ ಮೂಲಕ ಶುಭಕೋರಲಾಯಿತು. ನಂತಕ ಮಕ್ಕಳಿಗೆ ಹಣ್ಣು- ಹಂಪಲು, ಬ್ರೇಡ್, ಬಿಸ್ಕೀಟ್, ಚಾಕಲೇಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ವಿಧಾನಸಭಾ ಕ್ಷೇತ್ರ 73 ಗ್ರಾಮೀಣ ಅಧ್ಯಕ್ಷರಾದ ರಾಜು ಅನಂತಸಾ ನಾಯಕವಾಡಿ, ಹಿರಿಯ ಮುಖಂಡರಾದ ಗಂಗಾಧರ ಪೆರೂರ, ಇಮ್ತಿಯಾಜ ಖಾನ್ ತಡಕೋಡ, ಅಫ್ರೋಜ ಮೆಣಸಿನಕೊಪ್ಪ, ಶಂಕರ ಪವಾರ, ಬಾಳು ದಾನಿ, ಅನಮಂತಸಾ ಬದ್ದಿ, ಸಲೀಮ ಮುಲ್ಲಾ, ನವೀನ ಮಡಿವಾಳರ, ಪರ್ವೆಜ ಕಟ್ಟಿಮನಿ, ಸರಸ್ವತಿ ಕಟ್ಟಿಮನಿ, ಪೂರ್ಣಿಮಾ ಸವದತ್ತಿ, ಸಾಧೀಕ ಬೇಪಾರಿ ಸೇರಿದಂತೆ ಹಿರಿಯರು, ಯುವಕರು, ಕಾರ್ಯಕರ್ತರು, ಮಹಿಳಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

