ಧಾರವಾಡ : ನಾನು ನನ್ನ ಮಗಳ ಶಿಕ್ಷಣದ ಸಲುವಾಗಿ ಅಮೇರಿಕಾಕ್ಕೆ ಹೋಗಿದ್ದೆ . ಈಗ ವಾಪಸ್ ಬಂದಿದ್ದು , ಕ್ಷೇತ್ರದ ಅಭಿವೃದ್ಧಿ ಕೆಲಸದತ್ತ ಗಮನಹರಿಸುತ್ತೇನೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೆಲ್ಲದ್ , ನಾನು ನನ್ನ ಮಗಳ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಿದ್ದೆ . ಐದು ವರ್ಷದಿಂದ ನನ್ನ ಮಗಳು ಅಮೇರಿಕಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ
ಅವಳ ಕಾಲೇಜ್ ಪ್ರವೇಶದ ಸಂದರ್ಭದಲ್ಲೂ ನಾನು ಹೋಗಿರಲಿಲ್ಲ . ಅವಳ ಕಾಲೇಜ್ ಕೂಡ ನೋಡಿರಲಿಲ್ಲ . ಹೀಗಾಗಿ ಆರು ದಿನ ನಮ್ಮ ನಾಯಕರ ಗಮನಕ್ಕೆ ತಂದು ನಾನು ಅಮೇರಿಕಾಕ್ಕೆ ಹೋಗಿದ್ದೆ . ಇನ್ನು ಮುಂದೆ ನನ್ನ ಕ್ಷೇತ್ರದ ಸಮಸ್ಯೆಗಳತ್ತ ಗಮನಹರಿಸುತ್ತೇನೆ ಎಂದರು . ನೂಪುರ್ ಶರ್ಮಾ ಹೇಳಿಕೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ . ಪಕ್ಷ ಅವರ ಮೇಲೆ ಕ್ರಮ ಕೈಗೊಂಡಿದೆ ಎಂದರು .
bigtvnews | Hubli Dharwad News | Kannada News | Karnataka News Hubli News | News In Hubli | Local news

