Breaking News

ಓವರ್ ಟೇಕ್ : ವಕೀಲ, ಕಕ್ಷಿದಾರ ಸಾವು


ದೊಡ್ಡಬಳ್ಳಾಪುರ: ಓವರ್ ಟೇಕ್ ಮಾಡುವ ಭರದಲ್ಲಿ ಕಾರು ಬೈಕ್​​ಗೆ ಡಿಕ್ಕಿ ಹೊಡೆದಿದ್ದು, ಬೈಕ್​​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಗೌರಿಬಿದನೂರು – ದೊಡ್ಡಬಳ್ಳಾಪುರ ರಸ್ತೆಯ ಮೇಲಿನ ನಾಯಕರಂಡ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವಕೀಲ ಬಾಲಗಂಗಾಧರಯ್ಯ (61) ಹಾಗೂ ಅವರ ಕಕ್ಷಿದಾರ ಶಿವಶಂಕರಯ್ಯ (54)ಮೃತರು.

ಮೃತ ಬಾಲಗಂಗಾಧರಯ್ಯ ಗೌರಿಬಿದನೂರಿನ ಇಂದಿರಾ ನಗರದ ನಿವಾಸಿ. ಕಕ್ಷಿದಾರ ಶಿವಶಂಕರಯ್ಯ ಈಡಗೂರು ನಿವಾಸಿ. ಕೆಲಸ ನಿಮಿತ್ತ ಇವರು ದೊಡ್ಡಬಳ್ಳಾಪುರ ಕಡೆಯಿಂದ ಹಿಂದೂಪುರಕ್ಕೆ ಬೈಕ್​​​ನಲ್ಲಿ ಹೊರಟಿದ್ದರು. ಈ ವೇಳೆ, ಕಾರಿನ ಚಾಲಕ ಬೈಕ್​​ಗೆ ಡಿಕ್ಕಿ ಹೊಡೆದಿದ್ದಾನೆ. ಕಾರು ಸಹ ಪಲ್ಟಿಯಾಗಿದ್ದು, ಕಾರಿನಲ್ಲಿದ್ದವರಿಗೂ ಸಣ್ಣ ಪುಟ್ಟ ಗಾಯಾಗಳಾಗಿವೆ ಎಂದು ತಿಳಿದು ಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *