Breaking News

ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ


ಉಳ್ಳಾಲ: ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಘಟನೆ ತಲಪಾಡಿ ಕೆ.ಸಿ.ರೋಡ್ ಬಳಿ ಇರುವ ಶಾರದ ವಿದ್ಯಾನಿಕೇತನ ಶಾಲೆಯ ಹಾಸ್ಟೆಲ್ ನಲ್ಲಿ ನಡೆದಿದೆ.

9ನೇ ತರಗತಿಯ ವಿದ್ಯಾರ್ಥಿ ಪೂರ್ವಾಜ್ (14) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಪೂರ್ವಾಜ್ ಬೆಂಗಳೂರಿನ ಹೊಸಕೋಟೆ ಮೂಲದವನಾಗಿದ್ದು, ಶನಿವಾರ ಆತನ ತಾಯಿಯ ಹುಟ್ಟುಹಬ್ಬ ಇತ್ತು. ಈ ವೇಳೆ ತಾಯಿಗೆ ಶುಭ ಹಾರೈಸಲು ಹಾಸ್ಟೆಲ್ ಸಿಬ್ಬಂದಿಯೊಂದಿಗೆ ಫೋನ್‌ ಕೇಳಿದ್ದು, ಸಿಬ್ಬಂದಿ ಫೋನ್ ಕರೆ ಮಾಡಲು ಅವಕಾಶ ನೀಡಿರಲಿಲ್ಲ ಎನ್ನಲಾಗಿದ್ದು, ಇದರಿಂದ ನೊಂದ ವಿದ್ಯಾರ್ಥಿ ಪೂರ್ವಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಉಸಿರುಗಟ್ಟಿಸಿ ಪತಿಯ ಹತ್ಯೆ; ಪತ್ನಿ ಸೇರಿ ಮೂವರ ಬಂಧನ

ಬೆಂಗಳೂರು: ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದಿದ್ದ ಪತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಿದ ಆರೋಪದಡಿ ಪತ್ನಿ ಸೇರಿದಂತೆ ಮೂವರನ್ನು …

Leave a Reply

Your email address will not be published. Required fields are marked *