ಹುಬ್ಬಳ್ಳಿ : ಹಳೆ ಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ಯುವತಿ ವಿಚಾರಕ್ಕೆ ಚಾಕು ಇರಿದ ಪ್ರಕರಣ ನಡೆದ ಹಿನ್ನಲೆ ತಡರಾತ್ರಿ ಗಾಯಾಳು ಚಂದ್ರಶೇಖರನ್ನುಆಸ್ಪತ್ರೆಗೆ ದಾಖಸಲಾಗಿದ್ದು, ಚಿಕೆತ್ಸೆ ಫಲಕಾರಿಯಾಗದೆ ಮರಣಹೊಂದಿದ್ದಾನೆ.

ಆಟೋ ಚಾಲಕನಾಗಿದ್ದ ಚಂದ್ರಶೇಖರ ಧಾರವಾಡ ಕಾಲೊನಿಯಲ್ಲಿ ವಾಸವಾಗಿದ್ದ. ಕಳೆದ ರಾತ್ರಿ ಯುವತಿ ಒಬ್ಬಳ ವಿಷಯವಾಗಿ ಗಲಾಟೆ ನಡೆದಿತ್ತು. ಕೋಪಗೊಂಡಿದ್ದ ಯುವತಿ ಅಣ್ಣಂದಿರು ಚಂದ್ರುನಿಗೆ ಚಾಕು ಇರಿದಿದ್ದರು. ಯುವತಿ ಯೊಂದಿಗೆ ಚಂದ್ರಶೇಖರ ಅನೈತಿಕ ಸಂಬಂಧ ಹೊಂದಿದ್ದ .ಗಂಡನ ತೊರೆದು ಬಂದಿದ್ದ ಯುವತಿಯೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಚಂದ್ರಶೇಖರ.
ಈ ಬಗ್ಗೆ ಸಂಪರ್ಕ ಬಿಡುವಂತೆ ಅಣ್ಣ ತಮ್ಮಂದಿರು ಇಬ್ಬರಿಗೂ ಮೊದಲು ವಾರ್ನ್ ಮಾಡಿದ್ದರು. ನಿನ್ನೆ ಕೂಡ ಫೋನ್ ನಲ್ಲಿ ಮಾತನಾಡುವಾಗ ಜಗಳ ಶುರುವಾಗಿತ್ತು.ಈ ವೇಳೆ ಅಲ್ಲಿಗೆ ಹೋಗಿದ್ದ ಚಂದ್ರಶೇಖರ ಮೇಲೆ ಚಾಕುವಿನಿಂದ ಇರಿದಿದ್ದಾರೆ. ಅಭಿಷೇಕ್ ಹಾಗೂ ವಿನಾಯಕ ಮೇಲೆ ಆರೋಪಿಗಳು ಕೊಲೆ ಮಾಡಿದ್ದಾರೆ. ಕೊಲೆ ಆರೋಪಿಗಳನ್ನ 12 ಗಂಟೆಯಲ್ಲಿ ಹಳೆ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

bigtvnews | Hubli Dharwad News | Kannada News | Karnataka News Hubli News | News In Hubli | Local news





