Breaking News

ಪ್ರವೀಣ್ ಕುಟುಂಬಕ್ಕೆ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಕೊಟ್ಟ 10 ಲಕ್ಷ ರೂ ಹಣ ನನ್ನದು : ಉದ್ಯಮಿ‌ ಆರೋಪ


ಬೆಂಗಳೂರು: ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ದುಷ್ಕರ್ಮಿಗಳ ತಂಡದಿಂದ ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ವೈಯಕ್ತಿಕ ನೆರವು ಘೋಷಿಸಿದ್ದು, ಇದೀಗ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಯುವ ಉದ್ಯಮಿಯೊಬ್ಬರು ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಅವರು ಕೊಟ್ಟ 10 ಲಕ್ಷ ರೂ. ನನ್ನದು ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವರ ಇಲಾಖೆಯಡಿ ಬರುವ ಕರ್ನಾಟಕ ಇನ್ನೋವೇಟಿವ್‌ ಅಂಡ್‌ ಟೆಕ್ನಾಲಜಿ ಸೊಸೈಟಿ Karnataka Innovation and Technology Society ಸ್ಟಾರ್ಟಪ್‌ ಆಯ್ಕೆಯ ವಿಷಯದಲ್ಲಿ ಸಚಿವರಿಗೇ ಸಂದಾಯವಾಗಿರುವ ಹಣವನ್ನೇ ಇದೀಗ ಅವರು ಪ್ರವೀಣ್‌ ಕುಟುಂಬಕ್ಕೆ ಪರಿಹಾರವಾಗಿ ಘೋಷಿಸಿದ್ದಾರೆ. ಹಾಗಾಗಿ ಹತ್ಯೆಯಾಗಿರುವ ಬಿಜೆಪಿ ಕಾರ್ಯಕರ್ತನ ಕುಟುಂಬಕ್ಕೆ ವೈಯಕ್ತಿಕವಾಗಿ 10 ಲಕ್ಷ ನೀಡುತ್ತಿದ್ದೇನೆ ಅಂತ ಸಚಿವ ಡಾ. ಅಶ್ವಥ್ ನಾರಾಯಣ ಘೋಷಿಸಿರುವ ಹಣ ಅವರ ವೈಯಕ್ತಿಕ ಹಣ ಅಲ್ಲ. ಅದು ನನ್ನ ಹಣ. ಅದು ನನ್ನದೇ ಹಣ. ಅವರ ಹೇಳಿಕೆಯಲ್ಲಿ ಪ್ರವೀಣ್ ಕುಮಾರ್ ಅವರ 10 ಲಕ್ಷ ನೀಡುತ್ತಿದ್ದೇನೆ’ ಎಂದು ಆಗಬೇಕು ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯುವ ಉದ್ಯಮಿ ಪ್ರವೀಣ್ ಮಾವಿನಕಾಡು ಬರೆದುಕೊಂಡಿದ್ದಾರೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *