Breaking News

ಕೂಲಿ ಕಾರ್ಮಿಕರಿಗೆ ಹಣ ದೊರೆಯುತ್ತಿಲ್ಲ ಹಲವಾರು ಸೌಲಭ್ಯಗಳಿಂದ ನಾವು ವಂಚಿತಗೊಳ್ಳುತ್ತಿದ್ದೇವೆ : ಅಧಿಕಾರಿಗಳ ವಿರುದ್ಧ ದೂರು

ಹುಬ್ಬಳ್ಳಿ : ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಗ್ರಾಮೀಣ ಖಾತ್ರಿ ಕಾನೂನು ಅಡಿಯಲ್ಲಿ ದುಡಿದ ಕೂಲಿ ಕಾರ್ಮಿಕರಿಗೆ ಸರಿಯಾದ ಹಣ ದೊರೆಯುತ್ತಿಲ್ಲ ಸೇರಿದಂತೆ ಹಲವಾರು ಸೌಲಭ್ಯಗಳಿಂದ ನಾವು ವಂಚಿತಗೊಳ್ಳುತ್ತಿದ್ದೇವೆ. ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಧಾರವಾಡ ಜಿಲ್ಲಾ ಕಾರ್ಯಕರ್ತೆ ನಿರ್ಮಲಾ ಹನಸಿಯವರ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ದೂರಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಖಾತ್ರಿ ಕಾನೂನಿನಲ್ಲಿ ಆಗಾಗ ಬರುವ ಹೊಸ ತಂತ್ರಜ್ಞಾನ ಆಧಾರಿತ ಬದಲಾವಣೆಗಳು ಸೇರಿದಂತೆ ಹಲವು ಸಮಸ್ಯೆಗಳ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ ಉದ್ಯೋಗದ ಆಸಕ್ತಿ ಕಡಿಮೆಯಾಗಿದೆ.

ಮೊಬೈಲ್ ಆ್ಯಪ್ ಆಧಾರದ ಮೇಲೆ ಈ ಹಾಜರಾತಿಯನ್ನು ನಾವು ಸ್ಚಾಗತಿಸುತ್ತೇವೆ‌.ಆದರೆ ಬೆಳಿಗ್ಗೆ ಒಂದು ಸಾರಿ ಮಾತ್ರ ಹಾಜರಾತಿ ಇರಬೇಕು. ಈ ಹಿನ್ನಲೆಯಲ್ಲಿ ಕಾನೂನಿನಲ್ಲಿ ಇರುವಂತೆ ಕೆಲಸದ ಪ್ರಮಾಣದ ಆಧರಿಸಿ ಕೂಲಿ ಹಣ ನೀಡಬೇಕು ಅಥವಾ ೮ ತಾಸು ದುಡಿಮೆ ಎಂದಾದಲ್ಲಿ ಕನಿಷ್ಠ ವೇತನ ನಿಗದಿ ಮಾಡಲಿ, ಎರಡು ನಿಯಮಗಳು ಏಕಕಾಲಕ್ಕೆ ಅನ್ವಯ ಮಾಡಲಾಗುವುದು.
ಅಲ್ಲದೇ ಎಪ್ರಿಲ್‌, ಮೇ, ಜೂನ್ ತಿಂಗಳ ವೇತನ ಆಗಿಲ್ಲ. ಹೀಗಾಗಿ ತಕ್ಷಣ ಹಣ ಬಿಡುಗಡೆ ಮಾಡಬೇಕಜ ಮುಂದೆಯೂ ಇಂತಹ ಸಮಸ್ಯೆಯಾಗಬಾರದು.
ಕಾರ್ಮಿಕರು ಕೆಲಸದ ಜಾಗದಲ್ಲಿ ತಮ್ಮದೇ ಸಾಮಗ್ರಿ ವೆಚ್ಚ ದಿನ ಒಂದಕ್ಕೆ ೧೦ ರೂಪಾಯಿಗಳಂತೆ ಕಾರ್ಮಿಕರ ಖಾತೆಗೆ ಜಮಾ ಮಾಡಲಾಗುತ್ತಿತ್ತು, ಆದರೆ ಜೂನ್ ೨೦೨೨ ರಿಂದ ಇದನ್ನು ಕರ್ನಾಟಕದಲ್ಲಿ ರದ್ದು ಮಾಡಲಾಗಿದೆ. ಕೂಡಲೇ ೨೫ ರಂತೆ ಹೆಚ್ಚಿಸಿ ಕಾರ್ಮಿಕರ ಖಾತೆಗೆ ಕೂಲಿ ಹಣದೊಂದಿಗೆ ನೀಡಬೇಕು ಎಂಬ ಬೇಡಿಕೆಗಳನ್ನು ಈಡೇರಿಸಬೇಕು ಸರ್ಕಾರಕ್ಕೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈರಪ್ಪ ಎಮ್ಮಿ, ಹಜರತ್ ಅಲಿ ಸುಂಕದ, ಸುರೇಶ ಹಂಚಿನಮನಿ, ಮಾಬುಸಾಬ ಮನಗುಂಡಿ ಉಪಸ್ಥಿತರಿದ್ದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *