Breaking News

ರಾಜ್ಯದಲ್ಲಿ ಕೊರೋನಾ ಸಾವಿನ್ನ ಪ್ರಕರಣ ಏರಿಕೆ


ಬೆಂಗಳೂರು : ಕಳೆದೊಂದು ತಿಂಗಳಿನಿಂದ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡಿದ್ದ ರಾಜ್ಯದಲ್ಲಿ ಇದೀಗ ಸೋಂಕಿತರ ಸಾವಿನ ಪ್ರಮಾಣವೂ ಏರುತ್ತಿದೆ. ಯಾವುದೇ ಸಹ ಅಸ್ವಸ್ಥತೆ ಹೊಂದಿಲ್ಲದ 20 ವರ್ಷದ ಯುವತಿಯೊಬ್ಬಳು ಸೇರಿದಂತೆ ಬುಧವಾರ ಒಟ್ಟು ಐವರು ಸೋಂಕಿತರು ಮರಣವನ್ನಪ್ಪಿದ್ದಾರೆ.

24,504 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು 1,680 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಪಾಸಿಟಿವಿಟಿ ದರ ಶೇ.6.80ಕ್ಕೆ ಏರಿದೆ. 10,351 ಸಕ್ರಿಯ ಪ್ರಕರಣಗಳಿವೆ.

ಮಾರ್ಚ್‌ 18 ರಂದು ಐವರು ಸೋಂಕಿತರು ಮರಣವನ್ನಪ್ಪಿದ್ದರು. ಇದಾಗಿ 145 ದಿನಗಳ ಬಳಿಕ ಮೊದಲ ಬಾರಿಗೆ ದೈನಂದಿನ ಸಾವಿನ ಪ್ರಮಾಣ 5ಕ್ಕೆ ಏರಿಕೆ ಕಂಡಿದೆ. ಸಾವಿನ ಸಂಖ್ಯೆಯ ಏರಿಕೆಯೊಂದಿಗೆ ದಕ್ಷಿಣ ಕನ್ನಡದಲ್ಲಿ 20 ವರ್ಷದ ಯುವತಿಯೊಬ್ಬಳು ಸಹ ಅಸ್ವಸ್ಥತೆ ಹೊಂದಿಲ್ಲದಿದ್ದರೂ ಮರಣವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ವಿಷಮ ಶೀತಜ್ವರದಿಂದ ಬಳಲುತ್ತಿದ್ದ ಯುವತಿ ಆ.3ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಳು. ಚಿಕಿತ್ಸೆ ಫಲಿಸದೆ ಆ. 8 ಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಮರಣವನ್ನಪ್ಪಿದ್ದಾಳೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *