Breaking News

ಕೊನೆಗೂ ಹುಬ್ಬಳ್ಳಿ ಪೋಲಿಸ್ ರ ಬಲೆಗೆ ಬಿದ್ದ ಸೈಲನ್ಸರ್ ಕಳ್ಳರು

ಹುಬ್ಬಳ್ಳಿ: ECO ವಾಹನಗಳ ಸೈಲ್ಯನ್ಸರ್ ಕಳ್ಳತನ ಮಾಡುತ್ತೀರುವ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ECO ವಾಹನಗಳ ಸೈಲ್ಯನ್ಸರ್ ಕಳ್ಳತನ ಪ್ರಕರಣಗಳು ಅವಳಿ ನಗರ ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. ಕಸಬಾಪೇಟೆ, ಬೆಂಡಿಗೇರಿ, ವಿದ್ಯಾನಗರ, APMC ನವನಗರ ಸೇರಿದಂತೆ ಧಾರವಾಡ ದಲ್ಲೂ ಕೂಡ ಈ ಕಳ್ಳ ಹಾವಳಿ ಹೆಚ್ಚಾಗಿತ್ತು.

ಹಳೆ ಹುಬ್ಬಳ್ಳಿಯ ಕಲ್ಮೇಶ್ವರ ನಗರದ ತೋಹಿದ್ ECO ಕಾರ್ ನ ಸೈಲೆಸರ್ ಕಳ್ಳತನ ಮಾಡುತ್ತಿದ್ದ ಕಳ್ಳ, ಈತನಿಂದ ಧಾರವಾಡ ಮೂಲದ ಅಬ್ದುಲ್ ರಹಿಮ್ ಮಾಲು ಖರೀದಿಸುತ್ತಿದ್ದ ಸದ್ಯ ಇವರಿಬ್ಬರನ್ನ ಕಸಬಾಪೇಟೆ ಪೊಲೀಸ್ ಸಬ್ ಇನ್ಸಪೆಕ್ಟರ್ ರವಿ, ವಿಶ್ವನಾಥ್ ಕಾನ್ಸಟೇಬಲ್ ಗಳಾದ H S ಕಲ್ಲಾಪುರ,ಸರ್ಕಾರ, ನಾವಳ್ಳಿ ರಾಥೋಡ್,ಹಾಗೂ ಮೇಟಿ ಸೇರಿದಂತೆ ಪೂರ್ತಿ ಠಾಣೆಯ ಸಿಬ್ಬಂದಿ ಸತತ ಎರಡು ತಿಂಗಳು ಹಗಲು ರಾತ್ರಿ ವಾಹನದ ಗಸ್ತು ತಿರುಗಿ ಕೊನೆಗೂ ರೆಡ್ ಹ್ಯಾಂಡ್ ಆಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು eco ವಾಹನದಲ್ಲಿ ಬರುವ ಸೈಲೆನ್ಸರ್ ಅಲ್ಯೂಮಿನಿಯಂ ಮಾತ್ರ ಟಾರ್ಗೆಟ್ ಮಾಡುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ ಸದ್ಯ ಇವರಿಂದ 13 ಸೈಲೆನ್ಸರ್ ಸೇರಿ 10 ಲಕ್ಷ ಮೌಲ್ಯದ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದ್ದು ತೋಹಿದ್ ಹಾಗೂ ಅಬ್ದುಲ್ ರಹಿಮ್ ನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *