ಬೆಂಗಳೂರು: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಭಾರೀ ಅವಾಂತರ ಸೃಷ್ಟಿಯಾಗಿದೆ. ನಗರದ ವಿವಿಧೆಡೆ ದಾಖಲೆಯ ಮಳೆಯಾಗಿದ್ದು, ಬೆಳ್ಳಂದೂರಿನ ಎಕೋಸ್ಪೇಸ್ ಬಳಿ ಮತ್ತೆ ನೀರು ತುಂಬಿಕೊಂಡಿದೆ. ನಗರದ ವಿವಿಧೆಡೆ ರಸ್ತೆ, ಅಂಡರ್ ಪಾಸ್ ಹಾಗೂ ಮೇಲ್ಸೇತುವೆಗಳ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ತಾವರೆಕೆರ ಚೋಳನಾಯನಹಳ್ಳಿಯಲ್ಲಿ ಹೆಚ್ಚು ಮಳೆ ದಾಖಲಾಗಿದೆ. ಚೋಳನಾಯಕನಹಳ್ಳಿಯಲ್ಲಿ 15.5 ಮಿ.ಮೀ ಮಳೆ ದಾಖಲಾಗಿದೆ. ಸೊಂಡೆಕೊಪ್ಪ 79.5 ಮಿ.ಮೀ,ಹುಸ್ಕೂರು 70 ಮಿ.ಮೀ, ದಾಸಾನಪುರದಲ್ಲಿ 65.5 ಮಿ.ಮೀ ಮಳೆಯಾಗಿದೆ. ನಗರದ ಕಸ್ತೂರಿ ಬಾ ರಸ್ತೆ, ರಿಚ್ ಮಂಡ್ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದ್ದವು. ತುಮಕೂರು ರಸ್ತೆ, ಮಲ್ಲೇಶ್ವರ ರಸ್ತೆ, ಎಂ.ಜಿ ರಸ್ತೆ,ಡಬ್ಬಲ್ ರೋಡ್, ಆನಂದ್ ರಾವ್ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಹಾಗೂ ಅಂಡರ್ ಪಾಸ್ ನಲ್ಲಿ ನೀರು ನಿಂತುಕೊಂಡ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ.
ದೇವರಜೀವನಹಳ್ಳಿ, ಆರ್ ಟಿ ನಗರ, ಕೋರಮಂಗಲ ಸೇರಿದಮತೆ ನಗರದ ವಿವಿಧ ಕಡೆ 10 ಕ್ಕೂ ಹೆಚ್ಚು ಅಧಿಕ ಮರಗಳು ಉರುಳಿ ಬಿದ್ದಿವೆ. ಈ ಮೂಲಕ ವರುಣನ ಅಬ್ಬರಕ್ಕೆ ಸಿಲಿಕಾನ್ ಸಿಟಿ ನಲುಗಿ ಹೋಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

