Breaking News

ಅರಿಹಾ ಎಂಬ ಬಾಲಕಿಯನ್ನು ವಾಪಾಸ್ ಅವರ ಭಾರತೀಯ ಕುಟುಂಬಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ

ಹುಬ್ಬಳ್ಳಿ: ಭಾರತೀಯ ಮೂಲದ ದಂಪತಿಗಳ 7 ತಿಂಗಳ ಮಗುವನ್ನು ಜರ್ಮನಿಯ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಈ ಮೂಲಕ ಅರಿಹಾ ಎಂಬ ಬಾಲಕಿಯನ್ನು ವಾಪಾಸ್ ಅವರ ಭಾರತೀಯ ಕುಟುಂಬಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸಿ ಜೈನ್ ಸಮೂದಾಯದ ವಿವಿಧ ಸಂಘಟನೆಗಳು ನಗರದಲ್ಲಿ ಬೃಹತ್ ರ್ಯಾಲಿ ಪ್ರತಿಭಟನೆ ನಡೆಸಿದವು.

ನಗರದ ಕಂಚಿಗಾರ ಗಲ್ಲಿಯಿಂದ ತಹಶಿಲ್ದಾರರ ಕಚೇರಿವರೆಗೆ ನಡೆದ ರ್ಯಾಲಿಯಲ್ಲಿ ನೂರಾರು ಜೈನ ಸಮೂದಾಯದ ಜನರು ಭಾಗವಹಿಸಿ ಜರ್ಮನ್ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿದರು. ಈ ವೇಳೆ ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅರಿಹಾ ಮಗುವನ್ನು ವಾಪಾಸ್ ಭಾರತಕ್ಕೆ ಕರೆತರುವ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಇನ್ನು ತಹಶಿಲ್ದಾರರ ಕಚೇರಿ ಮುಂಭಾಗದಲ್ಲಿ ಭೇಟಿ ಪಡಾವೋ, ಭೇಟಿ ಬಚಾವೋ ಎಂಬ ಘೋಷಣೆ ಕೂಗಿದ ಪ್ರತಿಭಟನಾಕಾರರು, ಮುಂಬೈ ಮೂಲದ ಭವೇಶ್ ಷಾ ಎಂಬುವವರು ಜರ್ಮನಿಯ ಘಾಟ್ಲೋಡಿಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಧಾರಾ ಅವರನ್ನು ವಿವಾಹವಾಗಿದ್ದಾರೆ. ಸಾಫ್ಟವೇರ್ ಇಂಜಿನಿಯರ್ ಆಗಿರುವ ಅವರು ಬರ್ಲಿನ್ ನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಅರಿಹಾ ಎಂಬ ಹೆಣ್ಣು ಮಗು ಜನಿಸಿದೆ. ಈ ಮಗು ಏಳು ತಿಂಗಳು ಇರುವಾಗ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಆಗ ಜರ್ಮನಿಯ ವೈದ್ಯರಲ್ಲಿ ತೋರಿಸಿದಾಗ ಮಗುವಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದರು. ಆದರೆ ವೈದ್ಯರು ಎರಡು ದಿನದ ನಂತರ ಜರ್ಮನಿಯ ಅಧಿಕಾರಿಗಳನ್ನು ಕರೆಸಿ ಮಗುವನ್ನು ಪರಿಶೀಲಿಸಿ ದಂಪತಿಗಳ ಮೇಲೆ ದೌರ್ಜನ್ಯದ ಆರೋಪ ಹೊರಿಸಿದ್ದಾರೆ. ಇದಾದ ಬಳಿಕ ಅರಿಹಾ ಅನ್ನು ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದೀಗ ಭಾಷೆ ಸಮಸ್ಯೆಯಿಂದಾಗಿ ಅಧಿಕಾರಿಗಳಿಗೆ ಸರಿಯಾಗಿ ಮನವರಿಕೆ ಮಾಡಲು ದಂಪತಿಗಳು ವಿಫಲವಾಗಿದ್ದಾರೆ. ಇದೀಗ ಕಾನೂನು ಹೋರಾಟ ನಡೆಸಿದ ದಂಪತಿಗಳ ಮೇಲಿನ ಆರೋಪ ತೆರೆವುಗೊಳಿಸಲಾಗಿದೆ ಎಂದು ತಿಳಿದುಬಂದಿದ್ದು, ಕೂಡಲೇ ವಶದಲ್ಲಿರುವ ಮಗುವನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದರು.

ಈ ಹಿನ್ನೆಲೆಯಲ್ಲಿ ಅರಿಹಾ ಬಚಾವೋ ಅಭಿಯಾನದ ಅನ್ವಯ ರ್ಯಾಲಿಯನ್ನು ಈಗಾಗಲೇ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ನಡೆಸಲಾಗಿದ್ದು, ಅದರಂತೆ ಬೆಂಬಲಾರ್ಥವಾಗಿ ರ್ಯಾಲಿ ನಡೆಯಿತು. ಈ ಸಂದರ್ಭದಲ್ಲಿ ಜೈನ ಸಮುದಾಯದ ಮುಖಂಡ ಮಹೇಂದ್ರ ಸಿಂಘಿ, ರಾಜೇಂದ್ರ ಬಿಳಗಿ, ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ, ಸಚಿನ ಕಟಾರೀಯಾ, ಮಹೇಶ ಬಂಡಾರಿ, ದಿಲಿಪ್ ಜೈನ್ ಸೇರಿದಂತೆ ಮುಂತಾದವರು ಇದ್ದರು.

Share News

About BigTv News

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *