ದಕ್ಷಿಣ ಆಫ್ರಿಕಾದ ಬ್ಯಾಟರ್ ಡೇವಿಡ್ ಮಿಲ್ಲರ್ ಪುತ್ರಿ ನಿಧನರಾಗಿದ್ದಾರೆ. ಈ ಬಗ್ಗೆ ಸ್ವತಃ ಡೇವಿಡ್ ಮಿಲ್ಲರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳದೇ ಇದ್ದರು, ಮಗಳ ಜೊತೆಗಿನ ವಿಡಿಯೋವನ್ನು ಹಂಚಿಕೊಂಡಿದ್ದು, RIP ಮೈ ರಾಕ್‌ಸ್ಟಾರ್ ಎಂದು ಬರೆದುಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಮಿಲ್ಲರ್ ತನ್ನ ಮಗಳೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ, “ನನ್ನ ಪುಟ್ಟ ರಾಕ್‌ಸ್ಟಾರ್ RIP. ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ.” ಎಂದು ಶೀರ್ಷಿಕೆ ನೀಡಿದ್ದಾರೆ.
ಡೇವಿಡ್ ಮಿಲ್ಲರ್ ಮಗಳು ಕ್ಯಾನ್ಸರ್ ನಿಂದ ಪೀಡಿತಳಾಗಿದ್ದಳು, ಹಲವು ವರ್ಷಗಳ ಹೋರಾಟ್ ನಂತರ ಅವಳು ಇಹಲೋಕ ತ್ಯಜಿಸಿದ್ದಾಳೆ. ಮಿಲ್ಲರ್, ಪ್ರತ್ಯೇಕ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ಮಗಳ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮಗಳು ಕ್ಯಾನ್ಸರ್ ಜೊತೆ ಹೋರಾಡಿದ ಹಲವು ಫೋಟೊಗಳನ್ನು ಅದರಲ್ಲಿ ನೋಡಬಹುದಾಗಿದೆ.
“ನನ್ನ ಸ್ಕಟ್ ನಿನ್ನನ್ನು ತುಂಬಾ ಕಳೆದುಕೊಳ್ಳುತ್ತೇನೆ! ನಾನು ತಿಳಿದಿರುವ ಹೃದಯ ನಿನ್ನದು. ನೀನು ಸಾಕಷ್ಟು ಹೋರಾಟವನ್ನು ಮಾಡಿದೆ. ಯಾವಾಗಲೂ ನಂಬಲಾಗದಷ್ಟು ಧನಾತ್ಮಕ ನಗು ನಿನ್ನ ಮುಖದಲ್ಲಿ ಇರುತ್ತಿತ್ತು” ಎಂದು ಮಗಳ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

