Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ನೆಟ್‌ ಬ್ಯಾಂಕಿಂಗ್‌ 4 ಲಕ್ಷ ರೂ ವಂಚನೆ, ತನಿಖೆಯಲ್ಲಿ ಸೈಬರ್ ಕ್ರೈಂ ಪೊಲೀಸರ ನಿರ್ಲಕ್ಷ್ಯ..

ಕೊಪ್ಪಳ: ಇತ್ತೀಚಿನ ದಿನಗಳಲ್ಲಿ ಇಂಟರ್ ನೆಟ್‌ ಬ್ಯಾಂಕಿಂಗ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಅಷ್ಟೆ ವೇಗವಾಗಿ ಸೈಬರ್ ಖದೀಮರ ಕಾಟವು ಹೆಚ್ಚುತ್ತಿದೆ. ಈ ಹಿಂದೆ ಬ್ಯಾಂಕ್‌ ಖಾತೆಗೆ ಕನ್ನ ಹಾಕುವವರ ಪ್ರಕರಣಗಳು ಸಾಕಷ್ಟು ನೋಡಿದ್ದೇವೆ. ಈಗ ಅಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೊಪ್ಪಳ ಜಿಲ್ಲೆ ಗಂಗಾವತಿ ನಿವಾಸಿ ಗಿರೀಶ್ ಇವರ ಅಕೌಂಟ್ ನಲ್ಲಿದ್ದ ₹4 ಲಕ್ಷ ಹಣವನ್ನು ಹ್ಯಾಕರ್ಸ್ ಖಾಲಿ ಮಾಡಿದ್ದಾರೆ.ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ನಿವಾಸಿಯಾಗಿರುವ ಗಿರೀಶ್, ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದಾರೆ. ಕಳೆದ ವರ್ಷದ ಡಿಸೆಂಬರ್ 10ರಂದು ಬೆಳಗ್ಗೆ ತಮ್ಮ ಮೊಬೈಲ್‌ನಲ್ಲಿ ಮೆಸೇಜ್ ನೋಡಿಕೊಂಡಿರೋ ಇವರಿಗೆ ಅಕ್ಷರಶಃ ಶಾಕ್ ಆಗಿತ್ತು. ಯಾಕಂದ್ರೆ ಆ ಮಧ್ಯರಾತ್ರಿ ಸುಮಾರು 12.30ರ ಸುಮಾರಿಗೆ, ಬರೋಬ್ಬರಿ 4 ಲಕ್ಷ ರೂ ಮಾಯವಾಗಿತ್ತು. ಹಣಕ್ಕೆ ಕನ್ನ ಹಾಕಿದ್ದ ಮೆಸೇಜ್ ಅದಾಗಿತ್ತು.ಗಿರೀಶ್ ನೆಟ್ ಬ್ಯಾಂಕಿಂಗ್‌ ಬಳಕೆ ಮಾಡುತ್ತಿದ್ದು, ಹ್ಯಾಕರ್ಸ್‌ಗಳು ಐಡಿ ಮತ್ತು ಪಿನ್ ಹ್ಯಾಕ್ ಮಾಡಿದ್ದಾರೆ. ಬಳಿಕ ಇವರ ಅಕೌಂಟ್‌ನಿಂದ ಅಮೆಜಾನ್‌ಲ್ಲಿ ಆನ್‌ಲೈನ್ ಶಾಪಿಂಗ್ ಮಾಡಿ, ಅಕೌಂಟ್‌ನಲ್ಲಿದ್ದ ಹಣ ಖಾಲಿ ಮಾಡಿದ್ದಾರೆ. ಅರ್ಧ ಗಂಟೆಯಲ್ಲಿ ಸುಮಾರು 15 ಟ್ರಾನ್ಸಾಕ್ಷನ್ ಮಾಡಿಕೊಂಡಿರೋ ಖದೀಮರು. ಒಂದಷ್ಟು ಹಣವನ್ನು ಉತ್ತರ ಪ್ರದೇಶ ಮೂಲಕ ಯುವತಿಯೊಬ್ಬಳ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ಸಾಮಾನ್ಯವಾಗಿ ನೆಟ್ ಬ್ಯಾಂಕಿಂಗ್‌ ಮೂಲಕ ಆನ್‌ಲೈನ್ ಶಾಪಿಂಗ್ ಮಾಡಲು ಖಾತೆದಾರರ ರಿಜಿಸ್ಟರ್ ಮೊಬೈಲ್ ನಂಬರ್‌ಗೆ ಬರುವ ಒಟಿಪಿ ಹಾಕಿದ್ರೆ ಮಾತ್ರ ಹಣ ವರ್ಗಾವಣೆ ಆಗುತ್ತದೆ. ಆದ್ರೆ, ಸದ್ಯ ಹಣ ಕಳೆದುಕೊಂಡ ಗಿರೀಶ್​​ಗೆ ಯಾವುದೇ ಒಟಿಪಿ ಕೂಡ ಬಂದಿಲ್ವಂತೆ. ಇದರಿಂದ ಈ ಮಾದರಿಯ ವಂಚನೆಯಲ್ಲಿ ಆನ್ ಲೈನ್ ಶಾಪಿಂಗ್ ಕಂಪನಿಯ ಸಿಬ್ಬಂದಿಯೂ ಕೈಜೋಡಿಸಿರೋ ಸಾಧ್ಯತೆ ಇದೆ ಅಂತಾ ಗಿರೀಶ್ ಹೇಳಿದ್ದಾರೆ. ಈ ಬಗ್ಗೆ ಗಿರೀಶ್ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಆದ್ರೆ, ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗಿರೀಶ್ ಆರೋಪಿಸಿದ್ದಾರೆ. ಹಣ ಕಳೆದುಕೊಂಡಿರೋ ಗಿರೀಶ್ ಸದ್ಯ ತಮ್ಮ ಖಾತೆ ಇರುವ ಎಸ್‌ಬಿಐ ಶಾಖೆ ಮತ್ತು ಸೈಬರ್ ಪೊಲೀಸ್ ಠಾಣೆಗೆ ಅಲೆಯುತ್ತಿದ್ದು, ಒಬ್ಬರ ಮೇಲೊಬ್ಬರು ಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Share News

About Shaikh BIG TV NEWS, Hubballi

Check Also

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರೀ ಅಗ್ನಿ ಅವಘಡ – ಮೆಟ್ರೋ ಕಾಂಪ್ಲೆಕ್ಸ್‌ನಲ್ಲಿ ಲಕ್ಷಾಂತರ ನಷ್ಟ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ಭಾರೀ ಅಗ್ನಿ ಅವಘಡ ಸಂಭವಿಸಿದೆ. ಮರಾಠ ಗಲ್ಲಿಯಲ್ಲಿರುವ ಮೆಟ್ರೋ ಕಾಂಪ್ಲೆಕ್ಸ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ …

Leave a Reply

Your email address will not be published. Required fields are marked *