ಶಿರಾ : ಈದ್ ಮಿಲಾದ್ ಹಬ್ಬದ ದಿನ ಶಿರಾದಲ್ಲಿ ಮುಸ್ಲಿಮರ ಧಾರ್ಮಿಕ ಹಸಿರು ಧ್ವಜವನ್ನು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ. ತುಮಕೂರು: ಈದ್ ಮಿಲಾದ್ ಹಬ್ಬದ ದಿನ ಶಿರಾದಲ್ಲಿ ಮುಸ್ಲಿಮರ ಧಾರ್ಮಿಕ ಹಸಿರು ಧ್ವಜವನ್ನು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಗ್ರಾನೈಟ್ ಕೆಲಸ ಮಾಡುವ ರಮೇಶ್ ಹಾಗೂ ಪೇಂಟಿಂಗ್ ಕೆಲಸ ಮಾಡುವ ದೇವಿ ಪ್ರಸಾದ್ ಬಂಧಿತ ಆರೋಪಿಗಳು. ಹಬ್ಬದ ದಿನ ಧ್ವಜ ಸುಟ್ಟ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಶಿರಾದ ದರ್ಗಾ ಸರ್ಕಲ್ನಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದ್ದರು. ಶಿರಾ ಮತೀಯ ಸೂಕ್ಷ್ಮ ಪ್ರದೇಶವಾದ ಹಿನ್ನೆಲೆಯಲ್ಲಿ ಖುದ್ದು ಎಸ್.ಪಿ ರಾಹುಲ್ ಕುಮಾರ್ ಶಹಪುರವಾಡ್ ಸ್ಥಳಕ್ಕೆ ತೆರಳಿ ತಪ್ಪಿತಸ್ಥರನ್ನು ಬಂಧಿಸುವುದಾಗಿ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದರು. ಆರೋಪಿಗಳನ್ನು ಬಂಧಿಸಿದ ಪೊಲೀಸರು ಜ್ಯೂಡಿಷಿಯಲ್ ಕಸ್ಟಡಿಗೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

