Breaking News

21ಕ್ಕೆ ರಾಜ್ಯಮಟ್ಟದ ರೈತ ಸಮಾವೇಶ

ಹುಬ್ಬಳ್ಳಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಇದೇ 21ರಂದು ರಾಜ್ಯಮಟ್ಟದ ರೈತ ಬೃಹತ ಸಮಾವೇಶವನ್ನು ಧಾರವಾಡದ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ ತಾಲೂಕು ಅಧ್ಯಕ್ಷರಾದ ಮಂಜುನಾಥ ಕೊಪ್ಪದ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲ ತಲೆದೂರಿದ್ದರೂ ಕೂಡ ರಾಜ್ಯ ಸರ್ಕಾರ ಯಾವುದೇ ಕಿಂಚಿತ್ತೂ ಕಾಳಜಿ ತೋರದೇ ತಮ್ಮ ಇಷ್ಟಬಂದಂತೆ ಆಟವಾಡುವ ಮೂಲಕ ರಾಜ್ಯದ ರೈತರ ಜೊತೆ ಆಟವಾಡುತ್ತಿದ್ದಾರೆ‌ ಎಂದು ಅವರು ಆರೋಪಿಸಿದರು. ಅಲ್ಲದೇ ಅಧಿಕಾರಕ್ಕೆ ಬಂದ 24 ಗಂಟೆಯ ಒಳಗಾಗಿ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದ ಕುಮಾರಸ್ವಾಮಿ ರಾಜ್ಯದ ರೈತರ ಬಗ್ಗೆ ಯಾವುದೇ ಕಾಳಜಿ ತೋರದಿರುವುದು ರಾಜ್ಯದ ರೈತರ ಅಸಮಾಧಾನಕ್ಕೆ ಕಾರಣವಾಗಿದ್ದಾರೆ ಎಂದರು. ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾತಿನಲ್ಲಿ ಮಾತ್ರ ರೈತ ಕಳಕಳಿ ತೋರಿಸುತ್ತಾರೆ ವಿನಃ ಯಾವುದೇ ಜವಾಬ್ದಾರಿಯುತ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ ಎಂದರು. ರಾಜಕಾರಣದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರದಾಡುವ ರೀತಿಯಲ್ಲಿ ರೈತರು‌ ಕೂಡ ರಾಜಕೀಯ ಜನಪ್ರತಿನಿಧಿಗಳ ಕೈಗೊಂಬೆಯಾಗುವಂತಾಗಿದೆ ಇದು ಸರಿಯಲ್ಲ ರಾಜ್ಯದ ಹಾಗೂ ದೇಶದ ರೈತರ ಹಿತವನ್ನು ಕಾಪಾಡುವ ಕೆಲಸ ಬಿಟ್ಟು ಜನಪ್ರತಿನಿಧಿಗಳು ಅಧಿಕಾರಿದ ಚುಕ್ಕಾಣಿ ಹಿಡಿಯಲು ಮುಂದಾಗುತ್ತಿದ್ದಾರೆ ಇದನ್ನೆಲ್ಲಾ ಕೈ ಬಿಟ್ಟು ರೈತರ ಹಿತವನ್ನು ಕಾಪಾಡಬೇಕು ಅಲ್ಲದೇ ರೈತರ ಸಾಲವನ್ನು ಶೀಘ್ರವಾಗಿ ಮನ್ನಾ ಮಾಡಬೇಕು ಹಾಗೂ ರೈತರ ವಿವಿಧ ಬೇಡಿಕೆಯನ್ನು ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು. ಅಂದು ನಡೆಯಲಿರುವ ಸಮಾವೇಶಕ್ಕೆ ಕೋಡಿಹಳ್ಳಿ ಚಂದ್ರಶೇಖರ, ಎಚ್.ಆರ್.ಬಸವರಾಜಪ್ಪ, ಪಾರುಕ ಕಿಲ್ಲೇದಾರ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ಕಾಲವಾಡ, ರವಿ ತಿರ್ಲಾಪೂರ, ಕಲ್ಮೇಶ ಲಿಗಾಡೆ, ಮಲ್ಲಪ್ಪ ನೇಸರಗಿ, ಮಹಾದೇವಿ ಅಮಟೂರು ಸೇರಿದಂತೆ ಇತರರು ಇದ್ದರು.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *