ಹುಬ್ಬಳ್ಳಿ: ಮನೆಯಿಂದ ಉದ್ಯೋಗಕ್ಕೆ ತೆರಳುತ್ತಿದ್ದ 36 ವರ್ಷದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಇಲ್ಲಿನ ಕಸಬಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ಉಲ್ಪಥ್ ನಾಮ್, ಮಲಿಕ್ ಮತ್ತು ಮುಬಾರಕ್ ಬಂಧಿತ ಆರೋಪಿಗಳು. ಹಳೇಹುಬ್ಬಳ್ಳಿ ಇಂದಿರಾನಗರದ ಮಹಿಳೆ, ಮಂಗಳವಾರ ಮಧ್ಯಾಹ್ನ ಉದ್ಯಮ ನಗರದಲ್ಲಿರುವ ಫ್ಯಾಕ್ಟರಿ ಕೆಲಸಕ್ಕೆ ತೆರಳುತ್ತಿದ್ದಾಗ ಮೂವರು ಹಿಂಬಾಲಿಸಿಕೊಂಡು ಬಂದಿದ್ದರು.
ಅವರಲ್ಲಿ ಒಬ್ಬನು ಬಲವಂತವಾಗಿ ಅವರ ಬಾಯಿ ಮುಚ್ಚಿ, ಬಯಲು ಜಾಗಕ್ಕೆ ಎಳೆದೊಯ್ದಿದ್ದ. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಗಳು ಹಲ್ಲೆ ನಡೆಸಿ, ತಾವು ಹೇಳಿದಂತೆ ಕೇಳಬೇಕು ಎಂದು ಚಾಕು ತೋರಿಸಿ ಬೆದರಿಸಿದ್ದರು. ಮಹಿಳೆಯ ಚೀರಾಟದ ಸದ್ದು ಕೇಳಿ ಫ್ಯಾಕ್ಟರಿ ಕೆಲಸಗಾರರು ಸ್ಥಳಕ್ಕೆ ಬರುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದರು. ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

