ಧಾರವಾಡ, : ರೋಟರಿ ಕ್ಲಬ್ ಧಾರವಾಡ ಮಿಡ್ ಟೌನ್ ಸಂಸ್ಥೆಯು ನಾರಾಯಣಪುರದಲ್ಲಿನ ರೋಟರೀ ಶಾಖೆಯಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಶಾಲಾ ಮಕ್ಕಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಿತ್ತು.
ಸ್ಪರ್ಧೆಯಲ್ಲಿ ನಗರದ ಕೆಲಗೇರಿ ಜೆಎಸ್.ಎಸ್. ಪಬ್ಲಿಕ್ ಸ್ಜೂಲ್, ಕೆ.ಇ ಬೋರ್ಡ್ ಲೆಕ್ ಸಿಟಿ, ಬಾಶಲ್ ಮಿಷನ್ ಇಂಗ್ಲಿಷ್ ಮಾಧ್ಯಮ ಶಾಲೆ, ಬಿಜಿಎಸ್ ಹೈಸ್ಕೂಲ್, ಜೆ.ಎಸ್.ಎಸ್.ಮಂಜುನಾಥೇಶ್ವರ ಪಬ್ಲಿಕ್ ಶಾಲೆ, ಹುಬ್ಬಳ್ಳಿಯ ಸೇಂಟ್ ಮೇರಿ ಸ್ಕೂಲ್, ಎಸ್.ಆರ್.ಬೊಮ್ಮಾಯಿ ರೀಟರೀ ಸ್ಕೂಲ್,ಪರಿವರ್ತನ ಹೇರಿಟೇಜ್ ಗುರುಕುಲ ಮತ್ತು ನವಲಗುಂದ ತಾಲೂಕಿನ ಶಿರೂರ ಗ್ರಾಮದ ಸರಕಾರಿ ಪ್ರೌಢಶಾಲೆ ಸೇರಿದಂತೆ ಜಿಲ್ಕೆಯ ವಿವಿಧ ಶಾಲೆಗಳ ಸುಮಾರು 30 ಜನ ಪ್ರತಿಭಾವಂತ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭಾಷಣ ಸ್ಪರ್ಧೆ ವಿಜೇತರು ಭಾಷಣ ಸ್ಪರ್ಧೆಯಲ್ಲಿ ಧಾರವಾಡ ಸೆಂಟ್ ಜೋಷಪ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಶಾಹೀನ ಕಿತ್ತೂರ, ದ್ವೀತಿಯ ಸ್ಥಾನವನ್ನು ಬಸವರೆಡ್ಡಿ ಇಂಗ್ಲಿಷ ಮಾಧ್ಯಮ ಶಾಲೆಯ ಅಲೀಶಾ ಬಿ.ನದಾಫ್, ತೃತೀಯ ಸ್ಥಾನವನ್ನು ಹುಬ್ಬಳ್ಖಿಯ ಎಸ್.ಆರ್.ಬೊಮ್ಮಾಯಿ ಇಂಗ್ಲಿಷ ಪ್ರೌಢಶಾಲೆಯ ಮಾನಸಿ ಪೈ ಮತ್ತು ಸಮಾಧನಕರ ಬಹುಮಾನವನ್ನು ಬಿಜಿಎಸ್ ಪ್ರೌಢಶಾಲೆಯ ವಿನೋದ ಹಲಕಟ್ಟಿ ಮತ್ತು ಬಸವರೆಡ್ಡಿ ಶಾಲೆಯ ಸಾರಿಕಾ ನಾಗಠಾಣ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಯರಿಸ್ವಾಮಿ ಗುರುಜಿ,ಡಾ.ಪ್ರಕಾಶ ರಾಮನಗೌಡ್ರ, ಪ್ರಕಾಶ ಧರಣೆಪ್ಪಗೌಡರ, ಎಸ್.ವೈ.ಹೊಣ್ಣನ್ನವರ, ಶೇಖರ ಕುಂದಗೋಳ ಮತ್ತಿತ್ತರು ಇದ್ದರು.ಭಾಷಣ ಸ್ಪರ್ಧೆಯ ನಿರ್ಣಾಯಕರಾಗಿ ಪ್ರೌಢಶಾಲಾ ಶಿಕ್ಷರಾದ ಈಶ್ವರ ಉದ್ದಮೇಸಿ ಭಾಗವಹಿಸಿದ್ದರು. ರೋಟರಿ ಕ್ಲಬ್ ಧಾರವಾಡ ಮಿಡ್ ಟೌನ್ ಅಧ್ಯಕ್ಷ ಹರ್ಷಕುಮಾರ ತುರಮರಿ ಅವರು ಕಾಯ೯ಕ್ರಮದ ಅಧ್ಯಕ್ಷತೆವಹಿಸಿದ್ದರು. ಕ್ಲಬ್ ಕಾರ್ಯದರ್ಶಿ ಶಿವಯೋಗಿ ಅಮಿನಗಡ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

