ಹುಬ್ಬಳ್ಳಿ : ಅಖಿಲ್ ಭಾರತ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ
ರಾಹುಲ್ ಗಾಂಧಿ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಅವರಿಗೆ ರಾಜಕೀಯ ಪ್ರಬುದ್ಧತೆ ಕಡಿಮೆ ಇದ್ದು ಬೇಕಾದರೆ ನಮ್ಮಲ್ಲಿ ಬಂದರೆ ರಾಜಕೀಯ ಪಾಠ ಹೇಳಿ ಕೊಡುತ್ತೇವೆ ಎಂದುಕರ್ನಾಟಕ ಬಿಜೆಪಿ ಶಿಸ್ತು ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ ಲೇವಡಿ ಮಾಡಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಕುರಿತು ಮಾತನಾಡದೇ ಇರುವುದು ಒಳ್ಳೆಯದು. ಅವರಿಗೆ ಕಾಮನ್ ಸೆನ್ಸ್ ಇಲ್ಲ. ಅವರ ಕೊಡತಕ್ಕ ಹೇಳಿಕೆಗಳು ಅತ್ಯಂತ ಬಾಲಿಶತನದಿಂದ ಕೂಡಿದ್ದು ಕಾಂಗ್ರೆಸ್ ನಾಯಕರಿಗೆ ಇರುಸು ಮುರುಸು ಆಗುತ್ತೇ. ಪ್ರತಿಯೊಂದು ಸಲ ಒಂದೋಂದು ರೀತಿಯ ಹೇಳಿಕೆ ಅಪಹಾಸ್ಯವಾಗಿರುತ್ತವೇ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡರೇ ಏನು ಪ್ರೀತಿನೋ ಅಥವಾ ಧ್ವೇಷನೋ ಗೊತ್ತಿಲ್ಲ. ಅಸಂಬದ್ಧ ಹೇಳಿಕೆ ಕೊಡತಾ ಅನಗತ್ಯವಾದ ವಿವಾದ ಹುಟ್ಟು ಹಾಕತಾರೆ. ಈ ಹೇಳಿಕೆಗಳಿಂದ ದೊಡ್ಡ ನಾಯಕರಾಗಲು ಹೊರಟಿದ್ದು ಇದು ಸರಿಯಲ್ಲ.ಪ್ರಧಾನಿ ಮೋದಿಯವರು ‘ಸಬ್ಕಾ ಸಾಥ್ ಸಬ್ಕಾ ವಿಕಾಸ್ ಸಬ್ಕಾ ಪ್ರಯಾಸ್’ ಅನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗಾಗಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಇಡೀ ದೇಶವನ್ನೇ ಕಟ್ಟುವ ಕೆಲಸ ಮಾಡುತಿದ್ದು ಇದನ್ನ ಸ್ವಾಗತಿಸುವ ಮೂಲಕ ಅಭಿವೃದ್ಧಿಗೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅವರು ತಮ್ಮ ಆಡಳಿತ ಮತ್ತು ದೇಶದಲ್ಲಿ ಅವರು ಮಾಡುತ್ತಿರುವ ಕೆಲಸಕ್ಕಾಗಿ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಯಾರದೋ ಚೇಲಾ ಗಳ ಮಾತು ಕೇಳುತ್ತಾ ಸರಿಯಲ್ಲ ಹುಚ್ಚ ಹುಚ್ಚ ತರಾ ಮಾತಾಡುತ್ತಾ ಅವರು ಅಪಹಾಸ್ಯಕ್ಕೆ ಇಡುಗುತಿದ್ದಾರೆ. ಆದ್ದರಿಂದ ಅವರು ಅಖಿಲ್ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಆಗಲಿಲ್ಲ.
ಮೇಲಿಂದ ಮೇಲೆ ಇಂತಹ ಬಾಲಿಶತನದ ಹೇಳಿಕೆ ಕೊಡುವುದು ಬೇಡಾ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

