Breaking News

ಹುಬ್ಬಳ್ಳಿಯಲ್ಲಿ ಅಯ್ಯಪ್ಪ ಸ್ವಾಮಿಯ ಭವ್ಯ ಮೆರವಣಿಗೆ


ಹುಬ್ಬಳ್ಳಿ:  ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಈಗ ಶಬರಿ ಮಲೈ ನಿರ್ಮಾಣವಾಗಿದ್ದು, ಕರ್ನಾಟಕದ ಬಹುತೇಕ ಜನರಿಗೆ ಹುಬ್ಬಳ್ಳಿಯ ಶಿರೂರ ಪಾರ್ಕಿನಲ್ಲಿರುವ ದೇವಸ್ಥಾನವೇ ಶಬರಿ ಮಲೈ ಆಗಿದೆ. ಈ ನಿಟ್ಟಿನಲ್ಲಿ ಅದ್ದೂರಿಯಾಗಿ ಅಯ್ಯಪ್ಪ ಸ್ವಾಮಿ ಮೆರವಣಿಗೆ ಮಾಡಲಾಯಿತು.

ಇಲ್ಲಿಯ  ಶಿರೂರ್ ಪಾರ್ಕ್ ನಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವತಿಯಿಂದ ಅಯ್ಯಪ್ಪ ಸ್ವಾಮಿ ಮೆರವಣಿಗೆ ಮಾಡಲಾಯಿತು. ಸಕಲ ವಾದ್ಯ ವೈಭವದಿಂದ ಕುಂಭ ಮೇಳದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಗಿದ್ದು, ಮೆರವಣಿಗೆಗೆ ಆನಂದ ಗುರುಸ್ವಾಮಿ ಹಾಗೂ ಡಾ.ವಿ.ಎಸ್.ವಿ ಪ್ರಸಾದ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಇಲ್ಲಿರುವ ಅಯ್ಯಪ್ಪ ದೇಗುಲ ಕರ್ನಾಟಕದ ಶಬರಿ ಮಲೈ ಎಂದೇ ಖ್ಯಾತಿ ಪಡೆದಿದ್ದು, ಸಾವಿರಾರು ಭಕ್ತರಿಗೆ ದೀಕ್ಷೆ ನೀಡುರುವ ಪುಣ್ಯ ಕ್ಷೇತ್ರವಾಗಿ ಹುಬ್ಬಳ್ಳಿ ಶಿರೂರ ಪಾರ್ಕಿನ ಅಯ್ಯಪ್ಪ ಸ್ವಾಮಿ ದೇಗುಲ ಹೆಸರುವಾಸಿಯಾಗಿದೆ.1994-95ರಲ್ಲಿ ಶಂಕುಸ್ಥಾಪನೆಗೊಡ ಈ ದೇಗುಲ ಈಗ ಉತ್ತರ ಕರ್ನಾಟಕ ಮಾತ್ರವಲ್ಲದೆ ರಾಜ್ಯದಲ್ಲಿಯೇ ಕರ್ನಾಟಕದ ಶಬರಿಮಲೈ ಎಂದೇ ಖ್ಯಾತಿ ಪಡೆದಿದೆ.

ಈಗಾಗಲೇ ಸಾವಿರಾರು ಭಕ್ತರು ತಮ್ಮ ವೃತವನ್ನು ಇಲ್ಲಿಂದಲೇ ಪ್ರಾರಂಭಿಸಿ ಮಾಲೆ ಧರಿಸಿಕೊಂಡು ಅಯ್ಯಪ್ಪನ‌ ವೃತ ಮಾಡಿದ್ದಾರೆ. ಈಗ ಪುನಃ ಇಲ್ಲಿಯೇ ದರ್ಶನಕ್ಕೆ ಬರುತ್ತಿರುವುದು ವಿಶೇಷವಾಗಿದೆ. ಆನಂದ ಗುರುಸ್ವಾಮಿಯವರು ನೇತೃತ್ವದಲ್ಲಿ ನಿರ್ಮಾಣ ಮಾಡಿರುವ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ನಡೆಯುವ ಪೂಜೆ ಪುರಸ್ಕಾರ ನೋಡುವುದೇ ಒಂದು ಸೌಭಾಗ್ಯ.ಮಕ್ಕಳು, ವೃದ್ಧರು,ಅಂಗವಿಕಲರು ಕೂಡ ಶಿರೂರ ಪಾರ್ಕ್ ಅಯ್ಯಪ್ಪ ದೇವಸ್ಥಾನದಲ್ಲಿ ಭಕ್ತಿಯಿಂದ ಬೇಡಿಕೊಳ್ಳುವುದು ನಿಜಕ್ಕೂ ಭಕ್ತಿಭಾವವನ್ನು ಮತ್ತಷ್ಟು ಪುಷ್ಟಿಗೊಳಿಸುತ್ತದೆ.

Share News

About BigTv News

ಎ.ಐ.ಎಮ್.ಎಸ್.ಎಸ್‌ನಿಂದ ಮನವಿ

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *