Breaking News

ನರೇಗಾ ಯೋಜನೆ ಅಡಿಯಲ್ಲಿ  ಜನರಿಗೆ ಕೆಲಸ ನೀಡಬೇಕು ಎಂದು ಎ.ಐ.ಎಮ್.ಎಸ್.ಎಸ್‌ನಿಂದ ಮನವಿ


ಧಾರವಾಡ : ನರೇಗಾ ಯೋಜನೆ ಅಡಿಯಲ್ಲಿ ಧಾರವಾಡ ತಾಲೂಕಿನ ಅಮ್ಮಿನಭಾವಿ ಗ್ರಾಮದ ಜನರಿಗೆ ಕೆಲಸ ನೀಡಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎ.ಐ.ಎಮ್.ಎಸ್.ಎಸ್)ನ ಅಮ್ಮಿನಬಾವಿ ಗ್ರಾಮ ಘಟಕದಿಂದ ಇಂದು ಅಮ್ಮಿನಭಾವಿ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಗ್ರಾಮೀಣ ಭಾಗದ ಜನರಿಗೆ ಅನೂಕೂಲವಾಗಲೆಂದು ಸರಕಾರವು ತಂದಿರುವ ನರೇಗಾ ಯೋಜನೆಯಲ್ಲಿ ಕೆಲಸ ಪಡೆಯಲು ಗ್ರಾಮದ ಜನರು ಹರಸಾಹಸ ಪಡುತ್ತಿದ್ದಾರೆ. ಕೊರೋನಾ ತಂದೊಡ್ಡಿದ ಸಂಕಷ್ಟ ಮತ್ತು ಅತಿವೃಷ್ಟಿಯಿಂದಾದ ಬೆಳೆಹಾನಿಯಿಂದಾಗಿ ಜನರು ತೀವ್ರ ಸಮಸ್ಯೆಯಲ್ಲಿದ್ದಾರೆ. ಯಾವುದೇ ಉದ್ಯೋಗವಿಲ್ಲದೇ ಗ್ರಾಮಸ್ತರು ಸಂಕಷ್ಟದಲ್ಲಿ ಇದ್ದಾರೆ. ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ನೀಡದ ಕಾರಣ    ಗ್ರಾಮದ ಜನರು ಜೀವನೋಪಾಯಕ್ಕಾಗಿ ಅನಿವಾರ್ಯವಾಗಿ     ಪಟ್ಟಣದ ದಾರಿ ಹಿಡಿಯುವಂತಾಗಿದೆ ಮತ್ತು ಕಡಿಮೆ ಕೂಲಿಗೆ ಪರ ಊರುಗಳಿಗೆ ಹೋಗಿ ದುಡಿಯುವಂತಾಗಿದೆ. ಆದ್ದರಿಂದ ಅಮ್ಮಿನಬಾವಿ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಕೂಡಲೇ ಗಮನವಹಿಸಿ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಪ್ರಾರಂಭಿಸಬೇಕು ಮತ್ತು ಸಂಪೂರ್ಣ 100 ಮಾನವ ದಿನಗಳನ್ನು ನೀಡಬೇಕು ಎಂದು ಎ.ಐ.ಎಮ್.ಎಸ್.ಎಸ್ನ ಅಮ್ಮಿನಭಾವಿ ಗ್ರಾಮ ಘಟಕದಿಂದ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಮಿತಿಯ ನಾಯಕರುಗಳಾದ ಶ್ರೀಮತಿ ಮಧುಲತಾ ಗೌಡರ್‌, ದೇವಮ್ಮ ದೇವತ್ಕಲ್, ಸದಸ್ಯರಾದ ಕಾಶವ್ವ ತಲ್ವಾರ್, ಅಮ್ಮಿನಭಾವಿ ಗ್ರಾಮ ಘಟಕದ ಸದಸ್ಯರುಗಳಾದ ಫಕೀರವ್ವ ಮೋತನವರ, ಯಲ್ಲಮ್ಮ ವಕ್ಕುಂದ, ಶಾಂತಮ್ಮ ಕವಲಗೇರಿ, ಮಂಜುಳ ಹುಡೇದ, ಈರವ್ವ ಮೊದಲಾದವರು ಭಾಗವಹಿಸಿದ್ದರು.

Share News

About BigTv News

Check Also

ಸಹಾಯ ಮಾಡುವ ನಾಟಕವಾಡಿ ಯುವತಿಗೆ ಲೈಂಗಿಕ ದೌರ್ಜನ್ಯವೆಸೆದ ಕಾಮುಕರು!

ಯಾದಗಿರಿ ರೈಲು ನಿಲ್ದಾಣದಲ್ಲಿ 22 ವರ್ಷದ ಯುವತಿಗೆ ಸಹಾಯ ಮಾಡುವ ನೆಪದಲ್ಲಿ ಪರಿಚಯ ಮಾಡಿಕೊಂಡ ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ದೌರ್ಜನ್ಯ …

Leave a Reply

Your email address will not be published. Required fields are marked *