ಹುಬ್ಬಳ್ಳಿ: ಸಾರ್ವಜನಿಕರ ಕಣ್ಣಿಗೆ ಖಾರದ ಪುಡಿ ಎರಚಿ ಸರಗಳ್ಳತನ ಮಾಡುತ್ತಿದ್ದ ಚಾಲಾಕಿ ಕಳ್ಳರ ನ್ನು ರೆಡ್ ಆ್ಯಂಡ್ ಆಗಿ ಹಿಡಿಯುವಲ್ಲಿ ಹುಬ್ಬಳ್ಳಿಯ ವಿದ್ಯಾ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.ಕುಮಾರ ಸುಣಗಾರ(28, )ಗೌರೇಶ ಕೇರಕರ್ (30)ಬಂಧಿತ ಆರೋಪಿಗಳು,ಗೌರೇಶ ಕೇರಕರ್ ಗೋವಾ ಪೊಲೀಸ್ ಸಿಬ್ಬಂಧಿಯ ಮಗನಾಗಿದ್ದು ಕರ್ನಾಟಕ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಸರಗಳ್ಳತನ ಮಾಡುತ್ತಿದ್ದರು. ನಗರದಲ್ಲಿ ಸರಗಳ್ಳತನಮಾಡಿ ಪರಾರಿಯಾಗುತ್ತಿದ್ದಾಗ ವಿಧ್ಯಾನಗರದ ಪೋಲಿಸ್ ಸಿಬ್ಬಂದಿ ಚೆಸ್ ಮಾಡುವ ಮುಖಾಂತರ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಅಂತರರಾಜ್ಯ ಕಳ್ಳರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ವಿದ್ಯಾನಗರ ಪೋಲಿಸ್ ಠಾಣೆಯ ಸಿಬ್ಬಂದಿಗಳಾದ (ಭಿಮರಾವ್ ಹಚಡದ,ರಮೇಶ ಹಲ್ಲೆ ,ರುದ್ರಪ್ ಹೋರಟ್ಟಿ ) ಇವರಿಗೆ ೫ ಸಾವಿರ ನಗದು ಬಹುಮಾನ ರೂಪದಲ್ಲಿ ಕೊಡಲಾಗುತ್ತದೆ. ಬಂಧಿತ ಆರೋಪಿತರಿಂದ 100 ಗ್ರಾಂ ಚಿನ್ನ, ಒಂದು ಪಲ್ಸರ್ ಬೈಕ್ ಹಾಗೂ 4.15.500 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಹು-ಧಾ ಪೋಲಿಸ್ ಆಯುಕ್ತ ಎಮ್.ಎನ್. ನಾಗರಾಜ್ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





